ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ಗೆ ಜೈಲೂಟ ಸಾಕಾಗಿ ಹೋಗಿದೆ. ಜೈಲೂಟ ಸಾಕು, ಮನೆ ಊಟ ಕೊಡಿಸಿ ಎಂದು ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಅರ್ಜಿ ವಿಚಾರಣೆಗೆ ಪರಿಗಣಿಸಿ ಹೈಕೋರ್ಟ್ ವಿಚಾರಣೆ ಮುಂದೂಡಿದೆ. ಜುಲೈ 18ರಂದು ಮತ್ತೆ ದರ್ಶನ್ ಊಟದ ಅರ್ಜಿ ವಿಚಾರಣೆ ನಡೆಯಲಿದ್ದು, ಇನ್ನೂ 8 ದಿನ ದರ್ಶನ್ಗೆ ಮನೆ ಊಟ ಸಿಗಲ್ಲ. ಮನೆ ಊಟ, ಹಾಸಿಗೆ, ಬಟ್ಟೆ, ಪುಸ್ತಕ ಪಡೆಯಲು ದರ್ಶನ್ ಕೋರಿದ್ದ ಅರ್ಜಿಯನ್ನು ನ್ಯಾ. ಎಸ್. ಆರ್ ಕೃಷ್ಣಕುಮಾರ್ ಪೀಠದಲ್ಲಿ ವಿಚಾರಣೆ ನಡೆದಿದ್ದು, ದರ್ಶನ್ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದ ಮಂಡಿಸಿದ್ದಾರೆ.
ಜೈಲು ಗೈಡ್ಲೈನ್, ರೂಲ್ಸ್ ತೋರಿಸಲು ಹೈಕೋರ್ಟ್ ದರ್ಶನ್ ಪರ ವಕೀಲರಿಗೆ ಸೂಚನೆ ನೀಡಿದ್ದು, ಎಲ್ಲಾ ನಿಬಂಧನೆಗಳನ್ನು ಒಟ್ಟಿಗೆ ಮಾಡಿ ಅರ್ಜಿ ಸಲ್ಲಿಸಲು ಸೂಚನೆ ಕೊಟ್ಟಿದೆ. ಹಾಗೆಯೇ ಸರ್ಕಾರ ಮತ್ತು SPP ಪ್ರಸನ್ನಕುಮಾರ್ಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ಜುಲೈ 18ಕ್ಕೆ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.
ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್ಗೆ ಜೀರ್ಣವಾಗುತ್ತಿಲ್ಲ, ಇದರಿಂದ ಅತಿಸಾರ – ಭೇದಿ ಆಗುತ್ತಿದೆ ಎಂದು ದರ್ಶನ್ ಪರ ವಕೀಲರು ಬರೆದ ಅರ್ಜಿಯಲ್ಲಿ ಉಲ್ಲೇಖವಾಗಿತ್ತು. ಇದೇ ರೀತಿ ಮುಂದುವರಿದರೆ ದರ್ಶನ್ ಆರೋಗ್ಯ ಕೆಡಬಹುದು, ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆ ಆಗಲ್ಲ. ಸರಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತದೆ,
ಹೀಗಾಗಿ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ಕೊಡಿ ಎಂದು ದರ್ಶನ್ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದ್ದರು.
ಇದನ್ನೂ ಓದಿ : 3 ದಿನಗಳ ಹಿಂದೆಯೇ ರೇಡ್ಗೆ ನಡೆದಿತ್ತು ಮೆಗಾ ಪ್ಲಾನ್ – ವಾಲ್ಮೀಕಿ ಹಗರಣದ ಬಯಲಿಗೆ ED ಸೈಲೆಂಟ್ ಆಪರೇಷನ್..!