Download Our App

Follow us

Home » ಮೆಟ್ರೋ » ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹ*ತ್ಯೆ..!

ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹ*ತ್ಯೆ..!

ಬೆಂಗಳೂರು : ಬೆಂಗಳೂರಿನ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಡುರಸ್ತೆಯಲ್ಲಿ ಅಟ್ಟಾಡಿಸಿ ಕಾರ್ತಿಕೇಯನ್​ನನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಬಳಿಕ ರಕ್ತಸ್ರಾವವಾಗಿ ಕಾರ್ತಿಕೇಯನ್ ರಸ್ತೆಯಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಬಾಣಸವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಕಾರ್ತಿಕೇಯನ್ ಮೇಲೆ ಹಲವು ವರ್ಷಗಳಿಂದ ರೌಡಿಶೀಟರ್ ಇತ್ತು. ಇತ್ತೀಚೆಗಷ್ಟೆ ರೌಡಿಶೀಟರ್ ಕ್ಲೋಸ್ ಮಾಡಿಸಿಕೊಂಡಿದ್ದ. ಇತ ವಿವಾದಿತ ಜಾಗಗಳಿಗೆ ಬೇಲಿ ಹಾಕುತ್ತಾ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿದ್ದ. ಈ ವೇಳೆ ಮೈಕಲ್ ಮಂಜ ಹಾಗೂ ಸಹಚರರ ವಿರೋಧ ಕಟ್ಟಿಕೊಂಡಿದ್ದ.

ಇನ್ನು ಇತನ ಫ್ರೆಂಡ್ಸ್​ಗಳ ಬಳಿ ಲೆಸೆನ್ಸ್ ಇರೋ ಗನ್ ಪಡೆದುಕೊಂಡು ಕೆಲವರಿಗೆ ತೋರಿಸಿ ಬೆದರಿಕೆ ಹಾಕುತ್ತಿದ್ದ ಆರೋಪ ಕೂಡ ಕಾರ್ತಿಕೇಯನ್ ವಿರುದ್ದ ಇತ್ತು. ಇದರಿಂದ ರೋಸಿಹೋಗಿದ್ದ ಮೈಕಲ್ ಮಂಜು ಅಂಡ್ ಗ್ಯಾಂಗ್, ಪ್ಲಾನ್ ಮಾಡಿ ಅಟ್ಟಾಡಿಸಿ ಚಾಕು ಹಾಗೂ ಲಾಂಗ್​​ನಿಂದ ಹೊಡೆದು ಹತ್ಯೆ ಮಾಡಿದೆ. ಹಳೇ ದ್ವೇಷ ಹಾಗೂ ರಿಯಲ್ಎಸ್ಟೇಟ್ ವ್ಯವಹಾರದಲ್ಲಿ ಕಿರಿಕ್ ಆಗಿ ಹತ್ಯೆ ನಡೆದಿರೋ ಶಂಕೆ ವ್ಯಕ್ತವಾಗಿದೆ. ಈ ಕುರಿತು ಬಾಣಸವಾಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ತೆರೆ – ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟು ವೋಟಿಂಗ್ ಆಗಿದೆ? ಇಲ್ಲಿದೆ ವಿವರ..!

 

 

 

 

 

 

 

 

 

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here