Download Our App

Follow us

Home » ಅಪರಾಧ » ಜೈಲು ಸೇರಿರೋ ರೇವಣ್ಣಗೆ ಇಂದು ರಿಲೀಫ್ ಸಿಗುತ್ತಾ..?

ಜೈಲು ಸೇರಿರೋ ರೇವಣ್ಣಗೆ ಇಂದು ರಿಲೀಫ್ ಸಿಗುತ್ತಾ..?

ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ 17ನೇ ಎಸಿಎಂಎಂ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದರಿಂದ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಬಂಧನವಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಇಂದಿಗೆ (ಮೇ.9) ಮುಂದೂಡಿಕೆ ಆಗಿತ್ತು. ಈ ಹಿನ್ನಲೆ
ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ರೇವಣ್ಣಗೆ ಇಂದು ರಿಲೀಫ್​​ ಸಿಗುತ್ತಾ? ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಈಗಾಗಲೇ ಪ್ರಕರಣದ ವಾದ-ಪ್ರತಿವಾದವನ್ನು ಕೋರ್ಟ್ ಆಲಿಸಿದೆ. ಇಂದು ಬೇಲ್​ ಸಿಕ್ಕರೆ ಸಂಜೆ ವೇಳೆಗೆ ರೇವಣ್ಣಗೆ ರಿಲೀಸ್ ಭಾಗ್ಯ ಸಿಗಲಿದೆ. ಇಂದು ಕೂಡ ಬೇಲ್​ ಸಿಗದೇ ಹೋದ್ರೆ ಜೈಲಿನಲ್ಲೇ 3 ದಿನ ಕಾಯಬೇಕು.

ರೇವಣ್ಣ ಕೇಸ್​ನಲ್ಲಿ ವಕೀಲರ ವಾದ-ಪ್ರತಿವಾದ ಏನು? ರೇವಣ್ಣ ಪರವಾಗಿ ವಾದ ಮಂಡನೆ ಮಾಡಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್​ ಅವರು ಇಂದೂ ಬೇಲ್​​ ಮಂಜೂರು ಮಾಡುವಂತೆ ವಾದ ಮಾಡುವ ಸಾಧ್ಯತೆಯಿದೆ. ರೇವಣ್ಣ ಅವರಿಗೆ 65 ವರ್ಷ, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ತಮ್ಮ ಮೇಲೆ ಬಂದಿರುವ ಆರೋಪಗಳಿಂದ ಮಾನಸಿಕವಾಗಿ ಕುಗ್ಗಿದ್ದಾರೆ. ನಾಲ್ಕು ದಿನ SIT ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸಿದ್ದಾರೆ. ಕಸ್ಟಡಿ ವೇಳೆ ಅನಾರೋಗ್ಯ ನಡುವೆಯೂ ವಿಚಾರಣೆಗೆ ಸಹಕರಿಸಿದ್ದಾರೆ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡೋದಾಗಿ ರೇವಣ್ಣ ತಿಳಿಸಿದ್ದಾರೆ. ಕಿಡ್ನಾಪ್​ ಕೇಸ್​ನಲ್ಲಿ ಪಾತ್ರ ಇಲ್ಲ ಅಂತಾ ಖುದ್ದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಬೇಲ್​ ಮಂಜೂರು ಮಾಡಿ ಎಂದು ವಾದ ಮಾಡಲು ವಕೀಲರು ಸಿದ್ಧತೆ ಮಾಡಿಕೊಂಡಿದ್ದಾರೆ.

ಮತ್ತೊಂದೆಡೆ ಆಕ್ಷೇಪ ಸಲ್ಲಿಸಲಿರುವ SIT ಪರ SPP ಬಿ.ಎನ್​​.ಜಗದೀಶ್​ – ತನಿಖೆಗೆ ರೇವಣ್ಣ ಅವರು ಸರಿಯಾಗಿ ಸಹಕಾರ ನೀಡಿಲ್ಲ. ರೇವಣ್ಣ ಪ್ರಭಾವಿ ರಾಜಕಾರಣಿ ಆಗಿರೋದ್ರಿಂದ ಪ್ರಭಾವ ಬೀರಬಹುದು. ಸಾಕ್ಷ್ಯ ನಾಶ, ಸಂತ್ರಸ್ಥೆಯರನ್ನು ಸಂಪರ್ಕ ಮಾಡೋ ಸಾಧ್ಯತೆ ಇದೆ. ಮತ್ತೊಂದು ಕೇಸ್​ನಲ್ಲೂ ರೇವಣ್ಣ ಅವರನ್ನು ವಿಚಾರಣೆ ಮಾಡಬೇಕಿದೆ. ಈ ಎಲ್ಲಾ ಕಾರಣದಿಂದ ರೇವಣ್ಣಗೆ ಬೇಲ್​​​ ನೀಡುವುದು ಬೇಡ ಎಂದು ವಿಶೇಷ ಕೋರ್ಟ್​ನಲ್ಲಿ SPP ಬಿ.ಎನ್​​.ಜಗದೀಶ್ ವಾದ ಮಂಡನೆ ಮಾಡಲಿದ್ದಾರೆ. ಇಂದು ರೇವಣ್ಣ ಪಾಲಿಗೆ ವಿಶೇಷ ಕೋರ್ಟ್ ಆದೇಶ ವರವಾಗುತ್ತಾ ಅಥವಾ ಶಾಪವಾಗಿ ಪರಿಣಮಿಸುತ್ತಾ ಎಂದು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ಇಂದು SSLC ಫಲಿತಾಂಶ ಪ್ರಕಟ – ಎಷ್ಟು ಗಂಟೆಗೆ? ರಿಸಲ್ಟ್ ನೋಡುವುದು ಹೇಗೆ? ಇಲ್ಲಿದೆ ಮಾಹಿತಿ..!

 

 

 

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here