Download Our App

Follow us

Home » ರಾಜಕೀಯ » ಬಂಧನ ಸಂಕಷ್ಟದಿಂದ ಪಾರಾದ ಹೆಚ್​.ಡಿ ರೇವಣ್ಣ : ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್..!

ಬಂಧನ ಸಂಕಷ್ಟದಿಂದ ಪಾರಾದ ಹೆಚ್​.ಡಿ ರೇವಣ್ಣ : ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್..!

ಬೆಂಗಳೂರು : ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್‌ ಪಡೆದಿದ್ದಾರೆ. ಹೀಗಾಗಿ ಹೆಚ್​.ಡಿ.ರೇವಣ್ಣ ನಡೆ ತೀವ್ರ ಕುತೂಹಲ ಕೆರಳಿಸಿದೆ. ಮೂರ್ತಿನಾಯಕ್​​ ನಿನ್ನೆ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಲು ವಾದ ಮಾಡಿದ್ದರು. ಆದರೆ ಇಂದು SIT ಆಕ್ಷೇಪಣೆ ಸಲ್ಲಿಸಿದ ನಂತರ ಅರ್ಜಿ ವಾಪಸ್​ ಪಡೆದಿದ್ದಾರೆ. ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು.

ರೇವಣ್ಣ ಪರ ವಾದ ಮಂಡಿಸಿದ ವಕೀಲರು, ಬಲವಂತದ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದರು. ರೇವಣ್ಣ ವಿರುದ್ಧ IPC-376 ಸೆಕ್ಷನ್​​​​ ದಾಖಲಾಗಿಲ್ಲ. ರೇವಣ್ಣ ವಿರುದ್ಧ ಯಾವುದೇ ನಾನ್​​​​​ ಬೇಲಬಲ್​ ಸೆಕ್ಷನ್​ ಹಾಕಿಲ್ಲ, IPC-376 ಸೇರಿದಂತೆ ಯಾವುದೇ ನಾನ್​​ ಬೇಲಬಲ್​ ಕೇಸ್ ಹಾಕಿಲ್ಲ ಎಂದು ವಿಚಾರಣೆ ವೇಳೆ SIT ಪರ ವಕೀಲರಾದ SPP ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರೇವಣ್ಣ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ ಪಡೆದಿದ್ದಾರೆ.

ಹೆಚ್​.ಡಿ.ರೇವಣ್ಣ ಬಂಧನ ಸಂಕಷ್ಟದಿಂದ ಪಾರಾಗಿದ್ದು, ಅರೆಸ್ಟ್ ಮಾಡಲ್ಲ ಅಂತಾ ಗೊತ್ತಾಗ್ತಿದ್ದಂತೆ ಬೇಲ್​ ಅರ್ಜಿ ವಾಪಸ್​ ಪಡೆದಿದ್ದಾರೆ. ರೇವಣ್ಣ SIT ಮುಂದೆ ಹಾಜರಾಗಲು ನಿರ್ಧರಿಸಿದ್ದು, ಯಾವುದೇ ಕ್ಷಣದಲ್ಲಿ ರೇವಣ್ಣ SIT ಮುಂದೆ ಹಾಜರಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಹಾವೇರಿ : ಮಗ ಯುವತಿಯನ್ನು ಕರೆದುಕೊಂಡು ಹೋಗಿದ್ದಕ್ಕೆ ತಾಯಿಯನ್ನು ಕಂಬಕ್ಕೆ ಕಟ್ಟಿ ಹ*ಲ್ಲೆ..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here