ಬೆಂಗಳೂರು : ಮೂರು ವರ್ಷಗಳ ಬಳಿಕ ರಾಜ್ಯದಲ್ಲಿ ಇಂದು ಪಿಎಸ್ಐ ಪರೀಕ್ಷೆ ನಡೆಯಲಿದೆ. ಬೆಂಗಳೂರಿನ 117 ಸೆಂಟರ್ಗಳಲ್ಲಿ ಪಿಎಸ್ಐ ನೇಮಕಾತಿ ಮರು ಪರೀಕ್ಷೆ ನಡೆಯಲಿದೆ. ಕಳೆದ ಬಾರಿಯ ಪಿಎಸ್ಐ ಸ್ಕ್ಯಾಮ್ ದೇಶ ಮಟ್ಟದಲ್ಲಿ ಸದ್ದು ಮಾಡಿದ್ದ ಹಿನ್ನೆಲೆಯಿಂದಾಗಿ ಈ ಬಾರಿ ಪೊಲೀಸರು ನಗರದಾದ್ಯಂತ ಕಟ್ಟೆಚ್ಚರವಹಿಸಿದ್ದಾರೆ.
ನಗರದ 117 ಸೆಂಟರ್ ಗಳಲ್ಲಿ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ. ಕಮಿಷನರ್ ದಯಾನಂದ್ ಈಗಾಗಲೇ ಎಕ್ಸಾಂ ಸೆಂಟರ್ಗಳ ಸುತ್ತ ಮುತ್ತ 144 ಸೆಕ್ಷನ್ ಜಾರಿ ಮಾಡಲು ಆದೇಶಿಸಿದ್ದಾರೆ. 1000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ಬಂದೋಬಸ್ತ್ ಮಾಡಲಾಗಿದೆ.
ಪರೀಕ್ಷೆಗೆ ಬರುವ ಅಭ್ಯರ್ಥಿಗಳನ್ನ ಪೊಲೀಸರು ಕಂಪ್ಲೀಟ್ ಚೆಕ್ ಮಾಡಿ ಒಳ ಬಿಡಲಿದ್ದು, ವಸ್ತ್ರ ಸಂಹಿತೆ ಪಾಲನೆಯಲ್ಲಿ ಸ್ವಲ್ಪ ಡೌಟ್ ಬಂದ್ರೂ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಎಲೆಕ್ಟ್ರಾನಿಕ್ ಡಿವೈಸ್ಗಳ ಡಿಟೆಕ್ಟರ್ಗಳ ಮೂಲಕ ಸ್ಕ್ಯಾನಿಂಗ್ ಮಾಡಲಿದ್ದಾರೆ. ಅನುಮಾನಸ್ಪದವಾಗಿ ಯಾರೇ ಕಂಡ್ರೂ ಅವರನ್ನ ಕೂಡಲೇ ಪೊಲೀಸರು ವಶಪಡೆಯಲಿದ್ದಾರೆ.
ಈಗಾಗಲೇ ಲಿಂಗಯ್ಯ ಎಂಬಾತ ಅಕ್ರಮಕ್ಕೆ ಯತ್ನಿಸಿರೊ ಆರೋಪ ಕೇಳಿ ಬಂದಿರೋ ಹಿನ್ನೆಲೆಯಿಂದಾಗಿ ಪ್ರತೀ ಹಂತದಲ್ಲೂ ಪೊಲೀಸರು ಜಾಗ್ರತೆ ವಹಿಸಿದ್ದಾರೆ. ಪೊಲೀಸರು ಲಿಂಗಯ್ಯನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಇದನ್ನೂ ಓದಿ : ಅಬ್ಬಬ್ಬಾ ಬಿಗ್ ಬಾಸ್ ಬಗ್ಗೆ ಅಚ್ಚರಿ ಮೂಡಿಸಿದ ತನಿಷಾ ಕುಪ್ಪಂಡ… ಹೇಳಿದ್ದೇನು ನೋಡಿ..!