Download Our App

Follow us

Home » ರಾಜ್ಯ » ಯುಪಿಎಸ್​ಸಿ ಪರೀಕ್ಷೆಯಲ್ಲಿ ರಾಜ್ಯದ 25 ಮಂದಿಗೆ ರ್‍ಯಾಂಕ್​​ – ವಿಜಯಪುರದ ವಿಜೇತ ರಾಜ್ಯಕ್ಕೆ ಟಾಪರ್​​​​..!

ಯುಪಿಎಸ್​ಸಿ ಪರೀಕ್ಷೆಯಲ್ಲಿ ರಾಜ್ಯದ 25 ಮಂದಿಗೆ ರ್‍ಯಾಂಕ್​​ – ವಿಜಯಪುರದ ವಿಜೇತ ರಾಜ್ಯಕ್ಕೆ ಟಾಪರ್​​​​..!

ಬೆಂಗಳೂರು : 2023ನೇ ಸಾಲಿನ ಯುಪಿಎಸ್​ಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 25 ಮಂದಿ ರ್‍ಯಾಂಕ್​​ ಪಡೆದಿದ್ದಾರೆ. ವಿಜಯಪುರ ಮೂಲದ ವಿಜೇತ ಇಡೀ ರಾಜ್ಯಕ್ಕೆ ಟಾಪರ್​​​​ ಆಗಿದ್ದು, ದಾವಣಗೆರೆಯ ಸೌಭಾಗ್ಯ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಆರ್​​.ರಮ್ಯಾ, ವಿಜೇತಾ ಹೊಸಮನಿ, ಸೌಭಾಗ್ಯ ಬೀಳಗಿ ಮಠ, ಬೆಂಗಳೂರಿನ PSI ಶಾಂತಪ್ಪ ಕುರುಬರ್​​​ ಸೇರಿ 25 ಮಂದಿ ರ್ಯಾಂಕ್​​​ ಪಡೆದಿದ್ದಾರೆ. ಹಾಗಾಗಿ ಕೇಂದ್ರ ಸೇವೆಯ ವಿವಿಧ ಹುದ್ದೆಗಳಿಗೆ ಕನ್ನಡಿಗರು ಅರ್ಹತೆ ಪಡೆದುಕೊಂಡಿದ್ದಾರೆ. ವಿಜೇತಾಗೆ 100 ನೇ ರ್ಯಾಂಕ್​​​, ಧಾರವಾಡದ ಕೃಷಿ ಪದವೀಧರೆ ಸೌಭಾಗ್ಯ ಕೋಚಿಂಗ್​ಗೆ ಹೋಗದೇ 101ನೇ ರ್‍ಯಾಂಕ್​​ ಪಡೆದಿದ್ದಾರೆ. ಸ್ವಂತ ತರಬೇತಿ ಪಡೆದು ಸ್ವಪ್ರಯತ್ನದಲ್ಲೇ ಸೌಭಾಗ್ಯ UPSC ಪಾಸ್ ಮಾಡಿದ್ದಾರೆ.

ಶಾಂತಪ್ಪ ಕುರುಬರ 8ನೇ ಪ್ರಯತ್ನದಲ್ಲಿ 644ನೇ​ ರ್‍ಯಾಂಕ್, ಹುಬ್ಬಳ್ಳಿಯ ಕೃಪಾ ಜೈನ್​​ 440ನೇ ರ್‍ಯಾಂಕ್​​, ದೃಷ್ಟಿದೋಷ ಇರುವ ಕೆ.ಟಿ.ಮೇಘನಾ 721ನೇ ರ್‍ಯಾಂಕ್​​, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿ ಪುತ್ರಿ ಆರ್​​.ಯಶಸ್ವಿನಿ 379ನೇ ರ್‍ಯಾಂಕ್​​​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ದ್ವಾರಕೀಶ್..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here