Download Our App

Follow us

Home » ಸಿನಿಮಾ » ವೋಟ್ ಹಾಕೋಕೆ ಬರಲೇ ಇಲ್ಲ ನಟಿ ರಮ್ಯಾ, ರಶ್ಮಿಕಾ – ನೆಟ್ಟಿಗರಿಂದ ಭಾರೀ ಆಕ್ರೋಶ..!

ವೋಟ್ ಹಾಕೋಕೆ ಬರಲೇ ಇಲ್ಲ ನಟಿ ರಮ್ಯಾ, ರಶ್ಮಿಕಾ – ನೆಟ್ಟಿಗರಿಂದ ಭಾರೀ ಆಕ್ರೋಶ..!

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ಬಿರುಸಿನಿಂದ ನಡೆದಿದೆ. ಸ್ಯಾಂಡಲ್​ವುಡ್​ನ ಖ್ಯಾತ ನಟ ಹಾಗೂ ನಟಿಯರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ಆದರೆ ಸ್ಯಾಂಡಲ್​ವುಡ್​​ನ ಇಬ್ಬರು ಖ್ಯಾತ ನಟಿಯರು ಮತ ಹಾಕಿಲ್ಲ ಎಂದು ತಿಳಿದುಬಂದಿದೆ.

ಹೌದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಸ್ಟಾರ್​ ನಟ ನಟಿಯರು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಈ ಮಧ್ಯೆ ಸ್ಯಾಂಡಲ್​ವುಡ್​ ನಟಿ ರಮ್ಯಾ ಹಾಗೂ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಅವರು ಮತದಾನ ಮಾಡದೆ ಕರ್ತವ್ಯ ಮರೆತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಮತದಾನ ಹೊಂದಿದ್ದ ರಮ್ಯಾ ಅವರು ಮತದಾನ ಮಾಡದೇ ಕರ್ತವ್ಯ ಮರೆತಿದ್ದಾರೆ. ಇತ್ತ ನಟಿ ರಶ್ಮಿಕಾ ಮಂದಣ್ಣ ಕೂಡ ಈ ಬಾರಿ ಮತದಾನ ಮಾಡಿಲ್ಲ. ಹೀಗಾಗಿ ಈ ಇಬ್ಬರು ಸ್ಟಾರ್​ ನಟಿಯರ ಮೇಲೆ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ.

 

ರಮ್ಯಾ ವೋಟ್ ಹಾಕದೇ ಇರೋದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದಿನ ಎರಡು ಚುನಾವಣೆಯಲ್ಲೂ ರಮ್ಯಾ ವೋಟ್ ಮಾಡಿಲ್ಲ ಎಂದು ವರದಿಯಾಗಿದೆ. 2019ರ ಲೋಕಸಭೆ ಚುನಾವಣೆ ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲೂ ಮೋಹಕತಾರೆ ಮತದಾನ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಈಗ 2024ರಲ್ಲೂ ರಮ್ಯಾ ವೋಟ್ ಮಾಡಿಲ್ಲ.

ಇವರೊಂದಿಗೆ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ ಎಂದು ವರದಿಯಾಗಿದೆ. ರಶ್ಮಿಕಾ ಹುಟ್ಟೂರು ವಿರಾಜಪೇಟೆಯಲ್ಲಿ ಮತಚಲಾಯಿಸಬೇಕಿತ್ತು ಎನ್ನಲಾಗಿದೆ. ಆದರೆ, ರಶ್ಮಿಕಾ ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾದ ಬಳಿಕ ಕರ್ನಾಟಕದಲ್ಲಿ ಇರುವು ಕಡಿಮೆಯಾಗಿದೆ. ಹೀಗಾಗಿ ವೋಟ್ ಹಾಕದೇ ಇರುವುದಕ್ಕೆ ಅಸಲಿ ಕಾರಣವೇನು? ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಭಾರತೀಯರಾದರೂ ತವರೂರಿಗೆ ಬಂದು ವೋಟ್‌ ಹಾಕಲಿಲ್ಲ ಎಂಬ ಕಾರಣಕ್ಕೆ ಇದೀಗ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ಚುನಾವಣಾ ನೀತಿಸಂಹಿತೆ ಉಲ್ಲಂಘನೆ – ಶಾಸಕ ಯತ್ನಾಳ್ ವಿರುದ್ಧ FIR ದಾಖಲು..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here