Download Our App

Follow us

Home » ಅಪರಾಧ » ರಾಮೇಶ್ವರಂ ಕೆಫ್ ಸ್ಪೋಟ ಪ್ರಕರಣ​ – ದಾಳಿಯ ಪ್ರಮುಖ ಸಂಚುಕೋರ ಅರೆಸ್ಟ್‌..!

ರಾಮೇಶ್ವರಂ ಕೆಫ್ ಸ್ಪೋಟ ಪ್ರಕರಣ​ – ದಾಳಿಯ ಪ್ರಮುಖ ಸಂಚುಕೋರ ಅರೆಸ್ಟ್‌..!

ಬೆಂಗಳೂರು : ಇವತ್ತಿಗೆ 28 ದಿನದ ಹಿಂದೆ ರಾಜ್ಯ ರಾಜಧಾನಿಯಲ್ಲಿ ದೊಡ್ಡ ಸ್ಫೋಟವಾಗಿತ್ತು. ಈ ಘಟನೆಯಲ್ಲಿ ರಾಮೇಶ್ವರಂ ಕೆಫೆ ಛಿದ್ರಛಿದ್ರವಾಗಿತ್ತು. ಇದೀಗ, ಇದೇ ಬಾಂಬ್‌ ಸ್ಫೋಟ ಕೇಸ್‌ನಲ್ಲಿ ಎನ್‌ಐಎ ಮೊದಲು ಆರೋಪಿಯನ್ನು ಬಂಧಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೂರು ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಪ್ರಮುಖ ಸಂಚುಕೋರನನ್ನು ಬಂಧಿಸಿದೆ. ಈ ಬಗ್ಗೆ ಎನ್​ಐಎ ಟ್ವೀಟ್ ಮಾಡಿದ್ದು, ಪ್ರಮುಖ ಆರೋಪಿಯ ಬಂಧನದ ಬಗ್ಗೆ ಖಚಿತಪಡಿಸಿದೆ.

ನೂರಾರು ಸಿಸಿಟಿವಿ ತಡಕಾಡಿದ್ರು, ಹತ್ತಾರು ಊರು ಸುತ್ತು ಹಾಕಿದ್ರು. ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸರ್ಚ್‌ ಮಾಡಿದರೂ, ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಹಾಗಂಥ ಎನ್‌ಐಎ ಸುಮ್ನೇ ಕೂತಿರಲಿಲ್ಲ. ಹತ್ತಾರು ಟೆಕ್ನಿಕಲ್‌ ಎವಿಡೆನ್ಸ್‌ ಆಧಾರದಲ್ಲಿ ಫೀಲ್ಡ್‌ ಗೆ ಇಳಿದು, ಇದೀಗ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್​ಗೆ ಸಂಬಂಧಪಟ್ಟಂತೆ, ಬಾಂಬರ್ ಗೆ ಸಹಾಯ ಮಾಡಿದ್ದ ಮುಜಾಮಿಲ್ ಷರೀಫ್ ಎಂಬಾತನನ್ನ NIA ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಎನ್​ಐಎ ಅಧಿಕಾರಿಗಳು ಕರ್ನಾಟಕ ಸೇರಿದಂತೆ ವಿವಿದೆಡೆ ಬಳಿಕ ಕೀ ಕಾಂನ್ಸಪರೇಟರ್​​​ ಆಗಿದ್ದ ಆರೋಪಿ ಮುಜಾಮಿಲ್​ ಶರೀಫ್​ನನ್ನು ಅರೆಸ್ಟ್ ಮಾಡಿದ್ದು, ಮುಜಾಮಿಲ್​ ಶರೀಫ್ ಎನ್ನುವಾತ ರಾಮೇಶ್ವರಂ ಕೆಫ್​ ಬ್ಲಾಸ್ಟ್​ ಆದ ಬಾಂಬ್​ ತಯಾರಿಕೆಯ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೇ ಬಾಂಬರ್ ಮುಸಾವೀರ್​ ಹುಸೇನ್​ಗೆ ತುಂಬಾ ಆಪ್ತನಾಗಿದ್ದ ಎನ್ನಲಾಗಿದೆ.

ಬಂಧಿತ ಮುಜಾಮಿಲ್ ಷರೀಫ್ ಕಳೆದ ಒಂದುವರೆ ವರ್ಷದ ಹಿಂದೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಚಿಕನ್ ಕೌಂಟಿ ರೆಸ್ಟಾರೆಂಟ್ ನಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಬಸವೇಶ್ವರ ನಗರ ಠಾಣೆಯ ಸನಿಹದಲ್ಲೇ ಇರುವ ರೆಸ್ಟೋರೆಂಟ್ ಕಟ್ಟಡ ಮುಜಾಮಿಲ್ ಷರೀಫ್ ಸಪ್ಲೈಯರ್ ಆಗಿ ಕೆಲಸ ಮಾಡ್ತಿದ್ದ ಬಗ್ಗೆ ಮಾಹಿತಿಯಿದೆ. ಸದ್ಯ ರೆಸ್ಟೋರೆಂಟ್ ಶಿಪ್ಟ್ ಮಾಡಲಾಗಿದ್ದು, ಅದೇ ಸ್ಥಳದಲ್ಲಿ ಬೇರೊಂದು ಹೋಟೆಲ್ ಪ್ರಾರಂಭವಾಗಿದೆ.

ಸದ್ಯ ನಗರದಲ್ಲಿ ಎಲ್ಲಿ ವಾಸ್ತವ್ಯ ಹೂಡಿದ್ದ ಹಾಗೂ ಆತನ ಸ್ನೇಹಿತರ ಸಂಪರ್ಕದ ಬಗ್ಗೆ ಎನ್ ಐಎ ತನಿಖೆ ನಡೆಸುತ್ತಿದೆ. ಮುಜಾಮಿಲ್ ಷರೀಫ್ ಬಾಂಬರ್ ಗೆ ಕಚ್ಚಾ ವಸ್ತುಗಳ ಪೂರೈಕೆ ಜೊತೆ ಹಣಕಾಸು ವ್ಯವಸ್ಥೆ ಮಾಡಿರೋ ಬಗ್ಗೆ NIA ವಿಚಾರಣೆ ನಡೆಸುತ್ತಿದೆ. ಕಳಸ ಮೂಲದ ಶಂಕಿತ ಮುಜಾಮಿಲ್ ಮಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿದ್ದ. ಕೆಲ ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಎಂದು ಹೇಳಲಾಗಿದೆ. ಸಂಘಟನೆಯಲ್ಲಿ ಸಕ್ರಿಯ ಭಾಗಿಯ ಬಗ್ಗೆ ತನಿಖೆ ನಡೆಸುತ್ತಿರುವ NIA, ಸದ್ಯ ಬಾಂಬರ್ ಗಾಗಿ ಶೋಧಕಾರ್ಯ ತೀವ್ರಗೊಳಿಸಿದೆ.

ಇದನ್ನೂ ಓದಿ : ಏಪ್ರಿಲ್ 1ರಿಂದ ಮತ್ತೆ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ – ಯಾವ್ಯಾವ ವಾಹನಗಳಿಗೆ ಎಷ್ಟು?

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here