ಪ್ಯಾರಿಸ್ : ಪ್ಯಾರಾಲಿಂಪಿಕ್ಸ್ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನವದೀಪ್ ಪ್ಯಾರಾಲಿಂಪಿಕ್ಸ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಟೋಕಿಯೊ 2021 ಪ್ಯಾರಾಲಿಂಪಿಕ್ಸ್ನಲ್ಲಿ ಚೀನಾದ ಪೆಂಗ್‌ಕ್ಸಿಯಾಂಗ್ ಸನ್ 47.13m ದೂರಕ್ಕೆ ಜಾವೆಲಿನ್ ಎಸೆದಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ನವದೀಪ್ ಸಿಂಗ್ 47.32 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ವಿಶೇಷ ಎಂದರೆ ಈ ಸ್ಪರ್ಧೆಯಲ್ಲಿ ಆರಂಭದಲ್ಲಿ ನವದೀಪ್ ಬೆಳ್ಳಿ ಪದಕವನ್ನು ಗೆದ್ದಿದ್ದರು. ಆದರೆ ಇರಾನ್‌ನ ಬೀಟ್ ಸಡೆಗ್ ಅವರು ಕ್ರೀಡಾಹೀನ ನಡವಳಿಕೆಗಾಗಿ ಅನರ್ಹಗೊಂಡ ನಂತರ ನವದೀಪ್ ಅವರನ್ನು ಚಿನ್ನ ಪದಕಕ್ಕೆ ಅಪ್‌ಗ್ರೇಡ್ ಮಾಡಲಾಯಿತು. ಈ ಮೂಲಕ ನವದೀಪ್ ಸಿಂಗ್ ಭಾರತಕ್ಕೆ 7ನೇ ಚಿನ್ನದ ಪದಕ ತಂದುಕೊಟ್ಟರು.
ಸಿಮ್ರಾನ್ಗೆ ಕಂಚಿನ ಪದಕ : ಮಹಿಳೆಯರ 200 ಮೀ ಟಿ12 ಓಟದ ಸ್ಪರ್ಧೆಯಲ್ಲಿ ಭಾರತದ ಸಿಮ್ರಾನ್ ಶರ್ಮಾ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 29ಕ್ಕೆ ಏರಿದೆ.
ಇದನ್ನೂ ಓದಿ : ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್ಮೆಂಟ್ನ ಬೇಸ್ಮೆಂಟ್ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್..!