Download Our App

Follow us

Home » ರಾಜ್ಯ » ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಬಾಂಬರ್​ನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ NIA..!

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಬಾಂಬರ್​ನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ NIA..!

ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ 6 ದಿನ ಕಳೆದರೂ ಈವರೆಗೂ ಆರೋಪಿಯ ಬಗ್ಗೆ ಸುಳಿವು ಸಿಕ್ಕಿಲ್ಲ. ಸಿಸಿಟಿವಿ, ಮೊಬೈಲ್ ಟವರ್ ಡಂಪ್ ಅನಾಲಿಸಿಸ್ ಮಾಡಿದರೂ ಆರೋಪಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲಿಯವರೆಗೂ ದೊರೆತಿಲ್ಲ. ಬಾಂಬರ್​ನ ಪತ್ತೆಗಾಗಿ ಪೊಲೀಸರ ತಂಡವು ತೀವ್ರ ಶೋಧ ನಡೆಸುತ್ತಿದೆ. ಈ ಮಧ್ಯೆ ಕೆಫೆ ಬಾಂಬ್ ಸ್ಫೋಟದ ತನಿಖೆಯನ್ನ NIA ಅಧಿಕಾರಿಗಳು ಅಧಿಕೃತವಾಗಿ ಕೈಗೆತ್ತಿಕೊಂಡಿದ್ದು, ಇದೀಗ ಬಾಂಬರ್​ ಫೋಟೋ ಬಿಡುಗಡೆ ಮಾಡಿದೆ.

ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನ್ನ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದು, ಬುಧವಾರ ಬಾಂಬರ್‌ನ ಫೋಟೋವನ್ನು ಹಂಚಿಕೊಂಡಿದೆ. ಬಾಂಬರ್‌ನ ಬಂಧನಕ್ಕೆ ಕಾರಣವಾಗಬಲ್ಲ ಮಾಹಿತಿ ನೀಡಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಅಧಿಕೃತ ಘೋಷಣೆ ಮಾಡಿದೆ.

 

ಅದಲ್ಲದೆ, ಮಾಹಿತಿ ನೀಡಿದವರ ವ್ಯಕ್ತಿಯನ್ನು ಗೌಪ್ಯವಾಗಿ ಇಡುವುದಾಗಿ ತಿಳಿಸಿದೆ. ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಳಸಿ ಬಾಂಬ್‌ ಸ್ಫೋಟ ನಡೆಸಿದ ಶಂಕಿತನ ವಿಡಿಯೋಗಳು ಈಗಾಗಲೇ ವೈರಲ್‌ ಆಗಿದೆ. ಈ ವ್ಯಕ್ತಿಯ ಮಾಹಿತಿ ನೀಡಿ, ಆತನ ಬಂಧನಕ್ಕೆ ಕಾರಣವಾದಲ್ಲಿ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಬಾಂಬರ್​ನ ಮಾಹಿತಿಯನ್ನು 08029510900, 8904241100 ತಿಳಿಸುವಂತೆ ಎನ್‌ಐಎ ತಿಳಿಸಿದ್ದು, ಮಾಹಿತಿ ನೀಡಿದ ವ್ಯಕ್ತಿಯ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ರಾಜ್ಯದಲ್ಲಿ 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು – ಹೈಕೋರ್ಟ್ ಮಹತ್ವದ ಆದೇಶ..!

Leave a Comment

DG Ad

RELATED LATEST NEWS

Top Headlines

ದರ್ಶನ್​ಗೆ ಮತ್ತೊಂದು ಸಂಕಷ್ಟ – ಪ್ರೊಡ್ಯೂಸರ್ ಭರತ್​​​ಗೆ ಬೆದರಿಕೆ ಹಾಕಿದ್ದ ಕೇಸ್​ಗೆ ಮರುಜೀವ.. NCR ದಾಖಲು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ಕಷ್ಟಪಡುತ್ತಿರುವಾಗಲೇ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಯಂಗ್​ ಪ್ರೊಡ್ಯೂಸರ್ ಭರತ್​ಗೆ ಬೆದರಿಕೆ ಹಾಕಿದ್ದ

Live Cricket

Add Your Heading Text Here