Download Our App

Follow us

Home » ರಾಷ್ಟ್ರೀಯ » ರಾಜ್ಯಾದ್ಯಂತ ಇಂದು ರಂಜಾನ್ ಆಚರಣೆ : ಬೆಂಗಳೂರು ಸೇರಿದಂತೆ ಹಲವೆಡೆ ಮುಸಲ್ಮಾನ್ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ..!

ರಾಜ್ಯಾದ್ಯಂತ ಇಂದು ರಂಜಾನ್ ಆಚರಣೆ : ಬೆಂಗಳೂರು ಸೇರಿದಂತೆ ಹಲವೆಡೆ ಮುಸಲ್ಮಾನ್ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ..!

ಬೆಂಗಳೂರು : ಇಂದು ದೇಶದೆಲ್ಲೆಡೆ ರಂಜಾನ್​​​ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಸಹಸ್ರಾರು ಮಂದಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಬೃಹತ್​​ ಮೈದಾನ, ನಂದಿದುರ್ಗ ರಸ್ತೆಯ ಮೈದಾನದಲ್ಲಿ ಬೃಹತ್​ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದೆ.

ಕೇರಳದಲ್ಲಿ ಚಂದ್ರ ಗೋಚರಿಸಿದ ಹಿನ್ನೆಲೆಯಲ್ಲಿ ನಿನ್ನೆಯೇ ಕರಾವಳಿ ಭಾಗದಲ್ಲಿ ಹೊಸ ಉಡುಪು ಧರಿಸಿ, ಸಾಮೂಹಿಕ ಪ್ರಾರ್ಥನೆ  ಸಲ್ಲಿಸಿ, ಸಿಹಿ ತಿಂದು  ರಂಜಾನ್ ಹಬ್ಬವನ್ನು ಸಂಭ್ರಮ ಸಡಗರದಿಂದ ​ಆಚರಣೆ ಮಾಡಲಾಗಿತ್ತು.  ಇದೀಗ ಬೆಂಗಳೂರು ಸೇರಿದಂತೆ ಬಹುತೇಕ ಭಾಗದಲ್ಲಿ ಹಬ್ಬದ ಆಚರಣೆ ಮಾಡಲಾಗುತ್ತಿದೆ.

ಈದ್ಗಾ ಮೈದಾನ ಸುತ್ತಮುತ್ತ ಪೊಲೀಸ್ ಭದ್ರತೆ: ರಂಜಾನ್ ಹಿನ್ನೆಲೆ ಬೆಂಗಳೂರಿನ ಚಾಮರಾಚಪೇಟೆಯಲ್ಲಿರೋ ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್‌ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಮುಸ್ಲಿಂ ಬಾಂಧವರು ನಮಾಜ್‌ ಮಾಡುತ್ತಿದ್ದಾರೆ. ಅಲ್ಲದೇ ಸಿಎಂ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಸುತ್ತಮುತ್ತ ಒಬ್ಬ ಡಿಸಿಪಿ ಹಾಗೂ ನಾಲ್ಕು ಮಂದಿ ಎಸಿಪಿ ಎರಡು ಕೆಎಸ್‌ಆರ್‌ಪಿ ತುಕಡಿ ಸೇರಿ ಮುನ್ನೂರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ :ಮುನಿರತ್ನಗೆ ಠಕ್ಕರ್ ಕೊಡಲು ಆರ್​​.ಆರ್​​ ನಗರಕ್ಕೆ ಡಿಕೆಶಿ ಎಂಟ್ರಿ – ಸೋದರ ಡಿ.ಕೆ.ಸುರೇಶ್​ ಗೆಲ್ಲಿಸಲು ಮೆಗಾ ಪ್ಲಾನ್..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here