ಹುಬ್ಬಳ್ಳಿ : ರಾಮ ಮಂದಿರ ಕಟ್ಟಿರೋ ಜಾಗ ಸರಿಯಿಲ್ಲ, ಸುಪ್ರೀಂ ಕೋರ್ಟ್ ಹೇಳಿರೋ ಜಾಗದಲ್ಲಿ ಇವರು ಮಂದಿರ ಕಟ್ಟಿಲ್ಲ. ರಾಮ ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ ಎಂದು ಸಚಿವ ಸಂತೋಷ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಚಿವ ಸಂತೋಷ್ ಲಾಡ್ ಮಾತನಾಡಿ, ರಾಮ ಮಂದಿರ ಕಟ್ಟಿರೋದು ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ರಾಮ ಮಂದಿರ ಕಟ್ಟಿರೋದಕ್ಕೆ ನಮ್ಮ ವಿರೋದ ಇಲ್ಲ, ಆದ್ರೆ ರಾಮಮಂದಿರ ಕಟ್ಟಿರೋ ಜಾಗ ಸರಿ ಇಲ್ಲ, ಬೇರೆ ಜಾಗದಲ್ಲಿ ಕಟ್ಟಿದ್ದಾರೆ ಎಂದಿದ್ದಾರೆ.
ಅದು ಪೂರ್ತಿ ಕಟ್ಟಿಲ್ಲ, 40 ಪರ್ಸೆಂಟ್ ಕಟ್ಟಿದ್ದಾರೆ. ರಾಮ ಮಂದಿರ ಹೆಸರು ಹೇಳಿ ಯಾಕೆ ವೋಟ್ ಕೇಳ್ತೀರಾ ಅಂತ ಬಿಜೆಪಿಗೆ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಈ ದೇಶ ಎಲ್ಲರಿಗೂ ಸೇರಿದ್ದು, ಬಿಜೆಪಿಯವರು ದೇಶಕ್ಕೆ ಏನೋ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ದೇಶಕ್ಕೆ ಬಿಜೆಪಿಯವರು ಏನು ಮಾಡಿದ್ದಾರೆ? ದೇಶ ಸಾಲದಲ್ಲಿ ಮುಳುಗಿ ಹೋಗಿದೆ. ಮೋದಿ ಸಾಹೇಬರು ಮುಖ್ಯಮಂತ್ರಿ ಇದ್ದಾಗ ಮಾತಾಡಿರೋ ವಿಡಿಯೋ ಇದೆ. ಅದನ್ನು ಬಿಜೆಪಿಯವರು ಕೇಳಬೇಕು, ನಾವು ತೆರಿಗೆ ಕೇಳಿದ್ರೆ ಸುಳ್ಳು ರಾಮಯ್ಯ ಎನ್ನುತ್ತಿದ್ದಾರೆ. ಹೌದು ಸುಳ್ಳು ರಾಮಯ್ಯ ಎಂದರೆ ಹತ್ತು ವರ್ಷದಲ್ಲಿ ಇವರು ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಬೆಂಕಿ ಅವಘಡದಲ್ಲಿ ಮೂವರು ಸಜೀವ ದಹನ ಪ್ರಕರಣ : ಪರ್ಫ್ಯೂಮ್ ಗೋಡೌನ್ ಮಾಲೀಕರ ಮೇಲೆ ಕೇಸ್ ದಾಖಲು..!