Download Our App

Follow us

Home » ರಾಜಕೀಯ » ರಾಜ್ಯಸಭೆ ಚುನಾವಣೆ : ವಿಧಾನಸಭೆಯಲ್ಲಿ ಮತದಾನ ಆರಂಭ..!

ರಾಜ್ಯಸಭೆ ಚುನಾವಣೆ : ವಿಧಾನಸಭೆಯಲ್ಲಿ ಮತದಾನ ಆರಂಭ..!

ಬೆಂಗಳೂರು : ರಾಜ್ಯಸಭೆಯ 4 ಸ್ಥಾನಗಳಿಗೆ ಇಂದು ಬೆಳಿಗ್ಗೆ 9ಗಂಟೆಯಿಂದ ಮತದಾನ ಆರಂಭವಾಗಿದೆ. ಈವರೆಗೆ 60ಕ್ಕೂ ಹೆಚ್ಚು ಶಾಸಕರು ಮತ ಚಲಾಯಿಸಿದ್ದಾರೆ.

ಬಿಜೆಪಿಯ 45 ಶಾಸಕರಿಂದ ವೋಟಿಂಗ್​ ಆಗಿದ್ದು, ಕಾಂಗ್ರೆಸ್​​​ನ 10 ಶಾಸಕರು, ಜೆಡಿಎಸ್​​ನ 8 ಮಂದಿ ಮತ ಚಲಾಯಿಸಿದ್ದಾರೆ. ಒಬ್ಬೊಬ್ಬರಾಗಿ ಬಂದು ಶಾಸಕರು ಮತದಾನ ಚಲಾಯಿಸುತ್ತಿದ್ದಾರೆ. ಬಿಜೆಪಿಯಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷನಾಯಕ ಅಶೋಕ್​,ಮಾಜಿ ಸಚಿವ ಕೆ.ಗೋಪಾಲಯ್ಯ, ಸುರೇಶ್​​ ಕುಮಾರ್​​ ಸೇರಿ ಹಲವರ ವೋಟಿಂಗ್​ ಆಗಿದೆ.

ಜೆಡಿಎಸ್​ನಿಂದ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶಂಪೂರ್​​ ಮತದಾನ ಮಾಡಿದ್ದು, ಕಾಂಗ್ರೆಸ್​​ನಿಂದ M.B.ಪಾಟೀಲ್​​, ಶರಣ ಪ್ರಕಾಶ್​ ಪಾಟೀಲ್, ಗೃಹ ಸಚಿವ ಡಾ.ಜಿ.ಪರಮೇಶ್ವರ್​​​. ಕೆ.ಜೆ.ಜಾರ್ಜ್​ ಮತ ಚಲಾಯಿಸಿದ್ದಾರೆ.

ಕಾಂಗ್ರೆಸ್​ನಿಂದ ಅಜಯ್ ಮಾಕೇನ್​​​​​, ಸಯ್ಯದ್ ನಾಸೀರ್​ ಹುಸೇನ್​​, ಜಿ.ಸಿ.ಚಂದ್ರಶೇಖರ್​​​ ರಾಜ್ಯಸಭೆ ಕಣದಲ್ಲಿದ್ದಾರೆ. ಬಿಜೆಪಿಯಿಂದ ನಾರಾಯಣ ಭಾಂಡಗೆ ಸ್ಪರ್ಧೆಗಿಳಿದಿದ್ದು, ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರಿನ ಪೂರೈಕೆ ಸ್ಥಗಿತ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here