Download Our App

Follow us

Home » ಸಿನಿಮಾ » ಬಿಗ್‌ಬಾಸ್ ಮನೆಯಲ್ಲಿ ರೇಡಿಯೋ ಸ್ಟೇಷನ್..!

ಬಿಗ್‌ಬಾಸ್ ಮನೆಯಲ್ಲಿ ರೇಡಿಯೋ ಸ್ಟೇಷನ್..!

ನಿನ್ನೆಯ ಎಪಿಸೋಡಿನಲ್ಲಿ ಕೋಪ, ಆತ್ಮವಿಮರ್ಶೆ ನಂತರ ತನ್ನ ಸಹಸ್ಪರ್ಧಿಗಳ ಜೊತೆ ಮನಬಿಚ್ಚಿ ಮಾತನಾಡಿ ಹಗುರಾಗಿರುವ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಇಂದೊಂದು ರಂಜನೀಯ ಟಾಸ್ಕ್ ಸಿಕ್ಕಿದೆ. ಅದೇನೆಂದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿದೆ.

ಬಿಗ್‌ಬಾಸ್ ಮನೆಯೊಳಗೆ ರೇಡಿಯೋ ಸ್ಟೇಷನ್ ಸ್ಥಾಪಿತವಾಗಿದೆ. ಸ್ಟೇಷನ್‌ ಇಲ್ಲದೆಯೂ ರೇಡಿಯೋದ ಕೆಲಸ ಮಾಡುತ್ತಿದ್ದ ತುಕಾಲಿ ಅವರಿಗೆ ಮೈಕ್ ಸಿಕ್ಕರೆ ಕೇಳಬೇಕೆ? ’ಹಾಯ್ ಹಲೋ ನಮಸ್ಕಾರ’ ಎಂದು ಶುರುಮಾಡಿ ಅವರು ಮೊದಲು ಮಾತಾಡಿಸಿದ್ದು ವರ್ತೂರು ಸಂತೋಷ್ ಅವರನ್ನೇ. ಇದಕ್ಕೆ ಸಂಗೀತಾ ಹುಸಿಮುನಿಸಿನಿಂದ, ‘ಬರೀ ಅವ್ರನ್ನೇ ಮಾತಾಡಿಸ್ಬೇಕಾ?’ ಎಂದು ಗಾಳಿಯಲ್ಲಿ ಗುದ್ದಿದ್ದಾರೆ.

ಅಷ್ಟೇ ಅಲ್ಲ, ಕಾರ್ತಿಕ್ ಅವರಿಗೆ, ‘ಈ ಮನೆಯಲ್ಲಿ ತಲೆನೋವು ಎಂಬ ಪದಕವನ್ನು ಯಾರಿಗೆ ಕೊಡಲು ಬಯಸುತ್ತೀರಾ?’ ಎಂದು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್, ‘ಸಂಗೀತಾ’ ಎಂದು ಹೇಳಿದ್ದಾರೆ. ಅದಕ್ಕೆ ಸಂಗೀತಾ ಮುಖದಲ್ಲಿ ಅಸಮಧಾನದ ಗೆರೆಗಳು ಕಾಣಿಸಿಕೊಂಡಿವೆ. ಕಾರ್ತಿಕ್ ಅವರ ಉತ್ತರ ಕೇಳಿ ತುಕಾಲಿ ಅವರು, ‘ಈ ಸಂದರ್ಭದಲ್ಲಿ ನನಗೊಂದು ಹಾಡು ನೆನಪಾಗ್ತಿದೆ’ ಎಂದು ಹೇಳಿ ‘ಏನೋ ಮಾಡಲು ಹೋಗಿ.. ಏನು ಮಾಡಿದೆ ನೀನು…’ ಎಂದು ಹಾಡಿ ಮತ್ತೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಬಿಟ್ ಕಾಯಿನ್ ಕೇಸ್ : ಮೂವರು ಇನ್ಸ್​ಪೆಕ್ಟರ್​ಗಳ ವಿರುದ್ಧ ಪ್ರಕರಣ ದಾಖಲು..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here