Download Our App

Follow us

Home » ಅಪರಾಧ » ಬಿಟ್ ಕಾಯಿನ್ ಕೇಸ್ : ಮೂವರು ಇನ್ಸ್​ಪೆಕ್ಟರ್​ಗಳ ವಿರುದ್ಧ ಪ್ರಕರಣ ದಾಖಲು..!

ಬಿಟ್ ಕಾಯಿನ್ ಕೇಸ್ : ಮೂವರು ಇನ್ಸ್​ಪೆಕ್ಟರ್​ಗಳ ವಿರುದ್ಧ ಪ್ರಕರಣ ದಾಖಲು..!

ಬೆಂಗಳೂರು : ಬಿಟ್ ಕಾಯಿನ್ ಕೇಸ್​ನಲ್ಲಿ ಮತ್ತೊಂದು FIR ದಾಖಲಾಗಿದೆ. ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಇನ್ಸ್​ಪೆಕ್ಟರ್​​​​ ಲಕ್ಷ್ಮಿಕಾಂತಯ್ಯ, ಚಂದ್ರಧರ್ ಸೇರಿ ಮೂವರ ವಿರುದ್ದ ಕೇಸ್ ದಾಖಲಾಗಿದೆ. ಮೂವರು ಇನ್ಸ್ ಪೆಕ್ಟರ್​ಗಳಿಗೆ 41-A ಅಡಿ SIT ನೋಟಿಸ್ ನೀಡಿದ್ದಾರೆ. ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

CCB ಕಸ್ಟಡಿಯಲ್ಲೇ ಶ್ರೀಕಿ ಫಾರಿನ್​ ಕಂಪನಿಗೆ ಬಿಟ್​ಕಾಯಿನ್​ ವರ್ಗಾಯಿಸಿದ್ದು, ಶ್ರೀಕಿಯಿಂದ ಬಿಟ್ ಕಾಯಿನ್ ಡೀಲ್ ಮಾಡಲು ಹೊಸ ಲ್ಯಾಪ್ ಟಾಪ್ ಖರೀದಿ ಮಾಡಿದ್ದರು. ಹೊಸ ಲ್ಯಾಪ್​ಟಾಪ್​​ ಬಳಸಿ ಇನ್ಸ್​ಪೆಕ್ಟರ್​ಗಳು ಬಿಟ್ ಕಾಯಿನ್ ಡೀಲ್ ಮಾಡಿದ್ದಾರೆ. ನೆದರ್​​ಲ್ಯಾಂಡ್, ಸ್ವೀಡನ್ ಕಂಪನಿಗಳಿಗೆ ಬಿಟ್ ಕಾಯಿನ್ ವರ್ಗಾವಣೆ ಮಾಡಿರುವ ಆರೋಪ ವ್ಯಕ್ತವಾಗಿದೆ.

ಬಿಟ್ ಕಾಯಿನ್ ಟ್ರಾನ್ಸ್​ಫರ್​​​​ ನಂತ್ರ ಅಧಿಕಾರಿಗಳು ಲ್ಯಾಪ್​ಟಾಪ್​​​ ನಾಶ ಮಾಡಿದ್ದು, ತನಿಖೆ ನಡೆಸಿ CID ಸೈಬರ್ ಕ್ರೈಂ ಠಾಣೆಯಲ್ಲಿ ಮೂವರು ಇನ್ಸ್​ಪೆಕ್ಟರ್​ಗಳ ಮೇಲೆ ಕೇಸ್​ ದಾಖಲಾಗಿದೆ. SIT ಮುಖ್ಯಸ್ಥ ಮನೀಶ್​ ಖರ್ಬಿಕರ್ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಈಗಾಗಲೇ ಇನ್ಸ್​ಪೆಕ್ಟರ್​​ ಪ್ರಶಾಂತ್​ ಬಾಬು ಹಾಗೂ ಖಾಸಗಿ ಸೈಬರ್​​ ಎಕ್ಸ್​ಫರ್ಟ್ ಅರೆಸ್ಟ್​ ಆಗಿದ್ದಾರೆ.

ಬಂಧಿತ ಇನ್ಸ್​ಪೆಕ್ಟರ್​​ ಪ್ರಶಾಂತ್​​ ಬಾಬು ಇಂದು ಕೋರ್ಟ್​ಗೆ ಹಾಜರಾಗಲಿದ್ದು, SIT ಮಧ್ಯಾಹ್ನ 1ನೇ ACMM ಕೋರ್ಟ್ ಮುಂದೆ ಹಾಜರುಪಡಿಸಲಿದ್ದು, SIT ಟೀಂ ಅಧಿಕಾರಿಗಳು 10 ದಿನ ಕಸ್ಟಡಿಗೆ ಕೇಳಲಿದ್ದಾರೆ.

ಇದನ್ನೂ ಓದಿ : ರಾಹುಲ್ ಗಾಂಧಿ ಪರ ಪ್ರತಿಭಟನೆ : ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ವಿರುದ್ದ FIR..!

Leave a Comment

DG Ad

RELATED LATEST NEWS

Top Headlines

ಮೋಕ್ಷಿತಾಗೆ ಹತ್ತಿರವಾಗೋಕೆ ಹೊರಟ್ರಾ ಗೌತಮಿ – ವರ್ಕೌಟ್ ಆಗುತ್ತಾ ಆಟದ ಲೆಕ್ಕ?

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗ ಗೌತಮಿ, ಉಗ್ರಂ ಮಂಜು ಮತ್ತು ಮೋಕ್ಷಿತಾ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ನಂತರ ಟಾಸ್ಕ್​ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ

Live Cricket

Add Your Heading Text Here