ಬೆಂಗಳೂರು : ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ದ FIR ದಾಖಲಾಗಿದೆ. ರಾಹುಲ್ ಗಾಂಧಿಯ ಭಾರತ್ ಜೋಡೊ ನ್ಯಾಯ ಯಾತ್ರೆಗೆ ಅಸ್ಸಾಂನಲ್ಲಿ ಅಡ್ಡಿಪಡಿಸಿದ್ದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು.
ಬೆಂಗಳೂರಿನಲ್ಲೂ ಸಹ ರಾಹುಲ್ ಗಾಂಧಿ ಬೆಂಬಲಿಸಿ ಕಾಂಗ್ರೆಸ್ ಪಂಜಿನ ಮೆರವಣೆಗೆ ನಡೆಸಿತ್ತು. ಈ ಮೆರವಣೆಗೆಯಲ್ಲಿ ಭಾಗಿಯಾಗಿದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ವಿರುದ್ಧ FIR ದಾಖಲಾಗಿದೆ.
ಮಹಮ್ಮದ್ ನಲಪಾಡ್ ಸೇರಿದಂತೆ 25 ಮಂದಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ಭವನದ ಬಳಿ ಅನುಮತಿ ಪಡೆಯದೇ ಗುಂಪುಗೂಡಿ ಪ್ರತಿಭಟನೆ ಮಾಡಿದ್ದಾರೆ.
ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿ, ಅಕ್ರಮ ಜಮಾವಣೆ, ಮೈಕ್ ಮೂಲಕ ಅನ್ಸೌಮೆಂಟ್, ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಡಿ ದೂರು ಹೈಗ್ರೌಂಡ್ ಠಾಣೆಯ ಇನ್‌ಸ್ಪೆಕ್ಟರ್ ಭರತ್ ಸ್ವಯಂ ಪ್ರೇರಿತ ದೂರು ದಾಖಲಿಸಿ, ಎಫ್‌ಐಆರ್ ಮಾಡಲಾಗಿದೆ. ಎಫ್‌ಐಆರ್ ನಲ್ಲಿ ಮಹಮ್ಮದ್ ನಲಪಾಡ್ ಮೊದಲನೇ ಆರೋಪಿಯಾಗಿ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ : ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡ ಪವಿತ್ರಾಗೌಡ : ಕೇಸ್ ಹಾಕೋದಾಗಿ ವಾರ್ನಿಂಗ್ ಕೊಟ್ಟ ವಿಜಯಲಕ್ಷ್ಮಿ..!