Download Our App

Follow us

Home » ರಾಜಕೀಯ » ನಿಮ್ಮ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮೇಲೆ 44 ಕೋಟಿ ಆರೋಪವಿದೆ – ಬಿಜೆಪಿ ವಿರುದ್ಧ ಪ್ರೊ.ರಾಜೀವ್​ ಗೌಡ ವಾಗ್ದಾಳಿ..!

ನಿಮ್ಮ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮೇಲೆ 44 ಕೋಟಿ ಆರೋಪವಿದೆ – ಬಿಜೆಪಿ ವಿರುದ್ಧ ಪ್ರೊ.ರಾಜೀವ್​ ಗೌಡ ವಾಗ್ದಾಳಿ..!

ಬೆಂಗಳೂರು : ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಪ್ರೊ.ಎಂ.ವಿ. ರಾಜೀವ್‌ ಗೌಡ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾ ಖಾವೂಂಗಾ.. ನಾ ಖಾನೇ ದೂಂಗಾ ಅಂತಾ ಪ್ರಧಾನಿ ಹೇಳ್ತಾರೆ. ಆದರೆ ನಿಮ್ಮ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮೇಲೆ 44 ಕೋಟಿ ಆರೋಪವಿದೆ. ಶೋಭಾ ಅವರನ್ನು ಯಾಕೆ ಕೇಂದ್ರ ಸಂಪುಟಕ್ಕೆ ತಗೊಂಡ್ರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇದೇ ವೇಳೆ ರಾಜೀವ್​​ಗೌಡ ಮಾತನಾಡಿ, ಎಲೆಕ್ಟ್ರೋಲ್​​ ಬಾಂಡ್​ನಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಬೆಂಗಳೂರು ಉತ್ತರದಲ್ಲಿ ಬಿಜೆಪಿ ಶಾಸಕರಿಗೇ ಅವರ ಅಭ್ಯರ್ಥಿ ಬೇಕಿಲ್ಲ. ಬಿಜೆಪಿ ಕ್ಯಾಂಡಿಡೇಟ್ ವಿರುದ್ಧ ಅವರ ಪಕ್ಷದ ಶಾಸಕರೇ ಪ್ರಚಾರ ಮಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಇನ್ನು ಶಾಸಕ ಎಸ್.ಟಿ.ಸೋಮಶೇಖರ್ ನಮಗೆ ಬೆಂಬಲ ಕೊಟ್ಟಿದ್ದಾರೆ. ಸೋಮಶೇಖರ್​​ ಬಹಿರಂಗ ಬೆಂಬಲ ನಮಗೆ ಆನೆ ಬಲ ಸಿಕ್ಕಂತಾಗಿದೆ. ನನ್ನ ದೊಡ್ಡಪ್ಪ ಇಲ್ಲಿ ಜನಪ್ರತಿನಿಧಿ ಆಗಿದ್ದವರು, ಬೆಂಗಳೂರಿಗೆ ಕೊಡುಗೆ ನೀಡಿದ್ದಾರೆ. ಈ ಎಲ್ಲಾ ಕಾರಣದಿಂದ ಈ ಬಾರಿ ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್​ಗೆ ಗೆಲುವು ಖಚಿತ ಎಂದು ಪ್ರೊ.ರಾಜೀವ್​ಗೌಡ ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಲಕ್ಷ್ಮೀ ಹೆಬ್ಬಾಳ್ಕರ್‌-ಮುರುಗೇಶ್‌ ನಿರಾಣಿ ವಾಕ್ಸಮರ – ಸಚಿವೆಯ ಬೆಂಬಲಕ್ಕೆ ನಿಂತ ಪಂಚಮಸಾಲಿ ಸ್ವಾಮೀಜಿ..!

Leave a Comment

RELATED LATEST NEWS

Top Headlines

ಮಹಾರಾಷ್ಟ್ರದಲ್ಲಿ IT ಅಧಿಕಾರಿಗಳ ಬೃಹತ್​ ರೇಡ್​ – 26 ಕೋಟಿ ನಗದು, 90 ಕೋಟಿ ಮೌಲ್ಯದ ಸಂಪತ್ತು ಜಪ್ತಿ..!

ಮಹಾರಾಷ್ಟ್ರ : ಆದಾಯ ತೆರಿಗೆ ಇಲಾಖೆ (IT) ನಿನ್ನೆ ರಾತ್ರಿ ನಾಸಿಕ್‌ನಲ್ಲಿರುವ ಪ್ರಸಿದ್ಧ ಆಭರಣ ಮಳಿಗೆಯ ಮೇಲೆ ದಾಳಿ ನಡೆಸಿ 26 ಕೋಟಿ ಹಣವನ್ನು ಜಪ್ತಿ ಮಾಡಿದೆ. ಅಕ್ರಮ

Live Cricket

Add Your Heading Text Here