Download Our App

Follow us

Home » ಅಪರಾಧ » ಮಾರ್ಟಿನ್​​​ ಸಿನಿಮಾ ಪ್ರೊಡ್ಯೂಸರ್​​ ಉದಯ್ ಮೆಹ್ತಾಗೆ ಲೀಗಲ್ ನೋಟಿಸ್ ಜಾರಿ..!

ಮಾರ್ಟಿನ್​​​ ಸಿನಿಮಾ ಪ್ರೊಡ್ಯೂಸರ್​​ ಉದಯ್ ಮೆಹ್ತಾಗೆ ಲೀಗಲ್ ನೋಟಿಸ್ ಜಾರಿ..!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾಗೆ ಉದಯ್ ಕೆ. ಮೆಹ್ತಾ ಬಂಡವಾಳ ಹಾಕಿದ್ದಾರೆ. ಈ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಅವರು ಬೇರೆಯವರ ಜೊತೆ ಡೀಲ್ ಮಾಡಿಕೊಂಡು ನಿರ್ಮಾಪಕರು ನೀಡಿದ ಹಣದಲ್ಲೇ 50 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದಾರೆ ಎನ್ನುವ ಆರೋಪ ಬಂದಿತ್ತು. ಈ ಆರೋಪದ ವಿಚಾರವಾಗಿ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು. ಇದರ ಬೆನ್ನಲ್ಲೆ ನಿರ್ದೇಶಕ ಅರ್ಜುನ್ ಪರ ವಕೀಲ ಶಂಕರಪ್ಪರಿಂದ ಮಾರ್ಟಿನ್​​​ ಸಿನಿಮಾ ಪ್ರೊಡ್ಯೂಸರ್​​ ಉದಯ್ ಮೆಹ್ತಾಗೆ ಲೀಗಲ್ ನೋಟಿಸ್ ಜಾರಿಯಾಗಿದೆ.

ನಿರ್ದೇಶಕ ಅರ್ಜುನ್ ಪರ ವಕೀಲ ಶಂಕರಪ್ಪ ನೀಡಿರುವ ಲೀಗಲ್ ನೋಟಿಸ್​​​ನಲ್ಲಿ, 15 ದಿನದ ಒಳಗೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮಾರ್ಟಿನ್​​​ ಸಿನಿಮಾ ಪ್ರೊಡ್ಯೂಸರ್​​ ಉದಯ್ ಮೆಹ್ತಾಗೆ ಲೀಗಲ್ ನೋಟಿಸ್ ನೀಡಲಾಗಿದೆ. ಈ ನೋಟಿಸ್​​​ನಲ್ಲಿ,  2022ರಲ್ಲಿ ಚಿತ್ರ ನಿರ್ಮಾಣಕ್ಕಾಗಿ ಅರ್ಜುನ್​​ ಜೊತೆ ಅಗ್ರಿಮೆಂಟ್ ಆಗಿತ್ತು. ಬರುವ ಪ್ರಾಫಿಟ್​ನಲ್ಲಿ ಶೇ.18% ನಮ್ಮ ಕಕ್ಷಿದಾರನಿಗೆ ನೀಡಬೇಕಿತ್ತು. ಸರಿಯಾದ ಸಮಯಕ್ಕೆ ಚಿತ್ರೀಕರಣ ಮಾಡದ ಕಾರಣ ಮೂರು ಸಲ ಸಿನಿಮಾ ಬಿಡುಗಡೆ ದಿನಾಂಕ ‌ಮುಂದಕ್ಕೆ ಹೋಗಿದೆ.

ಈ ಕಾರಣದಿಂದ ನಿರ್ದೇಶಕ ಅರ್ಜುನ್​ಗೆ ಮುಂದಿನ ಪ್ರಾಜೆಕ್ಟ್​ ಮಾಡಲು ಆಗ್ತಾ ಇಲ್ಲ. ಸಿನಿಮಾ ಪೂರ್ಣಗೊಳ್ಳುವ ಟೈಂ ಬಗ್ಗೆ ಚರ್ಚಿಸಲು, ಬಾಕಿ ಹಣ ಕೊಡುವ ಬಗ್ಗೆ ಹಾಗೂ ಸಮಸ್ಯೆ ಬಗೆಹರಿಸಿಕೊಳ್ಳಲು ಮೆಸೇಜ್, ಫೋನ್ ಮಾಡಿದ್ರೂ ನೀವು ಸ್ಪಂದಿಸುತ್ತಿಲ್ಲ ಎಂದಿದೆ.

ಇನ್ನು 1.5 ಕೋಟಿಗೆ ಸಂಭಾವನೆಗೆ ಅಗ್ರಿಮೆಂಟ್ ಆಗಿದೆ. ಆದ್ರೆ ಈಗ ಸಿನಿಮಾ ತಡವಾಗಿದೆ. ಲೇಟಾಗಿ ಬಿಡುಗಡೆ ಆಗ್ತಿರೋದ್ರಿಂದ 3 ಕೋಟಿಯಷ್ಟು ಸಂಭಾವನೆ ಆಗುತ್ತದೆ. ನಿಮ್ಮ ಕ್ರಮಗಳಿಂದ ನನ್ನ ಕ್ಲೈಂಟ್‌ಗೆ ಹಣಕಾಸು ನಷ್ಟ, ವೃತ್ತಿಪರ ಹಿನ್ನಡೆ ಆಗ್ತಿದೆ. ನನ್ನ ಕ್ಲೈಂಟ್‌ಗೆ ಚಲನಚಿತ್ರದ GST ಮೊತ್ತದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈ ನೋಟಿಸ್ ಸ್ವೀಕರಿಸಿದ 15 ದಿನಗಳ ಒಳಗೆ ಎಲ್ಲಾ ಸಮಸ್ಯೆ ಬಗೆಹರಿಸಿಕೊಳ್ಳಿ ನಿಗದಿತ ಅವಧಿಯಲ್ಲಿ ಇತ್ಯರ್ಥ ಪಡಿಸಿಕೊಳ್ಳಸಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಲೀಗಲ್​ ನೋಟಿಸ್​ನಲ್ಲಿ ಮಾರ್ಟಿನ್​ ನಿರ್ದೇಶಕ AP ಅರ್ಜುನ್ ತಿಳಿಸಿದ್ದಾರೆ.

ಇದನ್ನೂ ಓದಿ : ವಿಜಯೇಂದ್ರ, ಆರ್​​.ಅಶೋಕ್ ವಿರುದ್ಧ 20ಕ್ಕೂ ಹೆಚ್ಚು ಬಿಜೆಪಿ ಮುಖಂಡರಿಂದ ದೆಹಲಿ ವರಿಷ್ಠರಿಗೆ ದೂರು..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here