ಬೆಂಗಳೂರು : ಯತ್ನಾಳ್, ಲಿಂಬಾವಳಿ ನೇತೃತ್ವದಲ್ಲಿ ವಿಜಯೇಂದ್ರ, ಆರ್.ಅಶೋಕ್ ಹಠಾವೋ.. ಬಿಜೆಪಿ ಬಚಾವೋ ಅಭಿಯಾನ ಶುರುವಾಗಿದೆ. ಕಾಂಗ್ರೆಸ್ ಜೊತೆ ವಿಜಯೇಂದ್ರ, ಅಶೋಕ್ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು 20ಕ್ಕೂ ಹೆಚ್ಚು ಮುಖಂಡರು ದೆಹಲಿ ವರಿಷ್ಠರಿಗೆ ದೂರು ನೀಡಿದ್ದಾರೆ.
ಅಷ್ಟೆ ಅಲ್ಲದೆ ಇಬ್ಬರನ್ನು ತೆಗೆದುಹಾಕುವಂತೆ ಬಿಜೆಪಿ ವರಿಷ್ಠರಿಗೆ ಯತ್ನಾಳ್, ಲಿಂಬಾವಳಿ ದೂರು ನೀಡಿದ್ದು, ಇವರು ಶೀಘ್ರದಲ್ಲೇ ಬಿಜೆಪಿ ವರಿಷ್ಠರನ್ನೂ ಭೇಟಿ ಮಾಡಲಿದ್ದಾರೆ. ವಿಜಯೇಂದ್ರ, ಆರ್.ಅಶೋಕ್ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ, ಯಾವ ಕಾರಣಕ್ಕೂ ಈ ಇಬ್ಬರ ನಾಯಕತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಜೆಡಿಎಸ್ ಕೂಡ ಇವರಿಬ್ಬರಿಗೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ, G.T. ದೇವೇಗೌಡಗೆ ನಾಯಕ ಸ್ಥಾನ ಸಿಗದೇ JDSನಲ್ಲಿ ಅಸಮಾಧಾನ ಇದೆ. ಇದನ್ನೂ ಬಿಜೆಪಿ ರಾಜ್ಯ ನಾಯಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ.
ವಾಲ್ಮೀಕಿ ಹಗರಣ, ಮೂಡ ಹಗರಣ, ಸರ್ಕಾರದ ವೈಫಲ್ಯ, ಮಳೆ ಹಾನಿ ಅಸ್ತ್ರ ಸಿಕ್ಕರೂ ಪರಿಣಾಕಾರಿ ಹೋರಾಟ ಮಾಡಿಲ್ಲ. ಬಹುತೇಕ ಸಚಿವರು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ, ಟೆಂಡರ್ ನೀಡುವಾಗ 20 ಪರ್ಸೆಂಟ್ ಕೇಳುತ್ತಿದ್ದಾರೆ. ಹಣ ಬಿಡುಗಡೆ, ಬಿಲ್ ಕ್ಲಿಯರ್ಗೆ LOC ನೀಡಲು 10% ಕೇಳುತ್ತಿದ್ದಾರೆ, ಸರ್ಕಾರದಲ್ಲಿ ಇಷ್ಟೆಲ್ಲಾ ಆಗ್ತಿದ್ರೂ ವಿಜಯೇಂದ್ರ, ಅಶೋಕ್ ಚಕಾರ ಎತ್ತಿಲ್ಲ. ಕೂಡಲೇ ವಿಜಯೇಂದ್ರ, ಅಶೋಕ್ಗೆ ಗೇಟ್ ಪಾಸ್ ಕೊಡಿ ಎಂದು 20ಕ್ಕೂ ಹೆಚ್ಚು ರಾಜ್ಯ ಬಿಜೆಪಿ ಮುಖಂಡರಿಂದ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ : ಕ್ರೈಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ – ಕನಕಪುರ ಪೊಲೀಸರಿಂದ ರೌಡಿಶೀಟರ್ಗಳ ಮೇಲೆ ಫೈರಿಂಗ್..!