ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
MLA ಮುನಿರತ್ನ ವಿರುದ್ದ ರೇಪ್ ಆರೋಪದ ಬೆನ್ನಲ್ಲೇ ಹನಿಟ್ರ್ಯಾಪ್ ವೀಡಿಯೋಗಳು ವೈರಲ್ ಆಗುತ್ತಿದೆ. ಒಂದರ ಹಿಂದೆ ಮತ್ತೊಂದರಂತೆ ಹನಿಟ್ರ್ಯಾಪ್ ವೀಡಿಯೋ ರಿಲೀಸ್ ಆಗುತ್ತಿದ್ದು, ಇದೀಗ ಮಾಜಿ ಕಾರ್ಪೊರೇಟರ್ ಪತಿಯೊಬ್ಬರ ಸೆಕ್ಸ್ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವೀಡಿಯೋ ವೈರಲ್ ಆಗುತ್ತಿದೆ. ಹನಿಟ್ರ್ಯಾಪ್ ವೀಡಿಯೋ ಪ್ರತಿ ಬಿಟಿವಿ ಬಳಿಯಿದೆ. ಆದರೆ ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಅದು ಪ್ರಸಾರಕ್ಕೆ ಯೋಗ್ಯವಾಗಿಲ್ಲ. ಹಾಗಾಗಿ ಸಮಾಜದ ಸ್ವಾಸ್ಥ್ಯ ಕದಡುವ ವೀಡಿಯೋ ಪ್ರಸಾರ ಮಾಡದಿರಲು ಬಿಟಿವಿ ನಿರ್ಧಾರ ಮಾಡಿದೆ.
Post Views: 22