Download Our App

Follow us

Home » ರಾಷ್ಟ್ರೀಯ » ಪ್ರಧಾನಿ ಮೋದಿ OBC ಸಮುದಾಯದಲ್ಲಿ ಹುಟ್ಟಿಲ್ಲ : ರಾಹುಲ್​ ಗಾಂಧಿ..!

ಪ್ರಧಾನಿ ಮೋದಿ OBC ಸಮುದಾಯದಲ್ಲಿ ಹುಟ್ಟಿಲ್ಲ : ರಾಹುಲ್​ ಗಾಂಧಿ..!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಜಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೊಸ ಚರ್ಚೆಯನ್ನು ಆರಂಭಿಸಿದ್ದಾರೆ. ಮೋದಿ OBC ಸಮುದಾಯದಲ್ಲಿ ಹುಟ್ಟಿಲ್ಲ, ಅವರು ಹುಟ್ಟಿರೋದು ಸಾಮಾನ್ಯ ವರ್ಗದಲ್ಲಿ ಎಂದು ಭಾರತ್​​ ಜೋಡೋ ನ್ಯಾಯಯಾತ್ರೆಯಲ್ಲಿ ರಾಹುಲ್ ಗಾಂಧಿ ಜಾತಿ ಪ್ರಸ್ತಾಪ ಮಾಡಿದ್ದಾರೆ.

ಒಡಿಶಾದ ಜಾರಸುಗುಡದಲ್ಲಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮೂರನೇ ಮತ್ತು ಮುಕ್ತಾಯದ ದಿನದಂದು ಸಂಕ್ಷಿಪ್ತ ಭಾಷಣ ಮಾಡಿದ ರಾಹು ಗಾಂಧಿ, ಮೋದಿ ಅವರು ಮೇಲ್ಜಾತಿಗೆ ಸೇರಿದ ಕುಟುಂಬದಲ್ಲಿ ಜನಿಸಿದರು. ಆದರೆ ಮೋದಿ, ತಾವು ಒಬಿಸಿ ಎಂದು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿ ಗುಜರಾತ್​​ನ ತೇಲಿ ಸಮುದಾಯಕ್ಕೆ ಸೇರಿದವರು, ಬಿಜೆಪಿ ಸರ್ಕಾರ 2000ದಲ್ಲಿ ಈ ಸಮುದಾಯಕ್ಕೆ OBC ರೂಪ ಕೊಡಲಾಯ್ತು. ಮೋದೀಜಿ ಸಾಮಾನ್ಯ ವರ್ಗದಲ್ಲಿ ಜನಿಸಿದ್ದವರು, ಇದೇ ಕಾರಣಕ್ಕೆ ಮೋದಿ ಜಾತಿ ಗಣತಿಯನ್ನು ವಿರೋಧ ಮಾಡ್ತಿದ್ದಾರೆ ಎಂದು ಪ್ರಧಾನಿ ಜಾತಿ ಕುರಿತು ರಾಹುಲ್​ ಗಾಂಧಿ ಹೇಳಿದ್ದಾರೆ.

ರಾಹುಲ್​​ ಹೇಳಿಕೆಗೆ ಬಿಜೆಪಿ ನಾಯಕರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಹುಲ್​​​​ ಇಂಥಾ ಮಾತುಗಳಿಂದಲೇ ನಗೆಪಾಟಲಾಗುತ್ತಿದ್ದಾರೆ, ಇವತ್ತು ಮೋದಿ ಹಿಂದುಳಿದ, ಪರಿಶಿಷ್ಟ ವರ್ಗದ ಮಹಾನ್​ ನಾಯಕ. ಇದನ್ನು ಸಹಿಸದೇ ಕಾಂಗ್ರೆಸ್​ ನಾಲಾಯಕ್​​​ ಹೇಳಿಕೆ ನೀಡುತ್ತಿದೆ ಎಂದು ಸಂಸತ್​​​ ಭವನದ ಬಳಿ ಮಾಜಿ ಸಚಿವ ರವಿಶಂಕರ್​​ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಸಜ್ಜಾದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ?

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here