Download Our App

Follow us

Home » ರಾಷ್ಟ್ರೀಯ » ರಾಮನೂರಿನಲ್ಲಿ ಪ್ರಧಾನಿ ಮೋದಿ : ಪ್ರಾಣ ಪ್ರತಿಷ್ಠಾಪನೆ ಸೇರಿ ಮೋದಿಯ ಇಂದಿನ ಕಾರ್ಯಕ್ರಮಗಳೇನು?

ರಾಮನೂರಿನಲ್ಲಿ ಪ್ರಧಾನಿ ಮೋದಿ : ಪ್ರಾಣ ಪ್ರತಿಷ್ಠಾಪನೆ ಸೇರಿ ಮೋದಿಯ ಇಂದಿನ ಕಾರ್ಯಕ್ರಮಗಳೇನು?

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪಣೆಗೆ ಕ್ಷಣಗಣನೆ ಶುರುವಾಗಿದೆ. 70 ಎಕರೆಯಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ ರಾಮರಾಜ್ಯ ಎಲ್ಲರ ಗಮನ ಸೆಳೆಯುತ್ತಿದೆ. ಅಯೋಧ್ಯೆ ಮಧುವಣಗಿತ್ತಿಯಂತೆ ರೆಡಿಯಾಗಿದ್ದು, ಇಂದು ರಾಮಲಲ್ಲಾ ದರ್ಶನ ನೀಡಲಿದ್ದಾನೆ.

ಮಧ್ಯಾಹ್ನದ ಅಭಿಜಿನ್​ ಲಗ್ನದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದ್ದು, ಪ್ರಧಾನಿ ಮೋದಿ ಅಯೋಧ್ಯೆ ರಾಮಮಂದಿರ ಉದ್ಘಾಟಿಸಲಿದ್ದಾರೆ. ಪ್ರಧಾನಿ ರಾಮನೂರಿನಲ್ಲಿ ಬರೋಬ್ಬರಿ 5 ಗಂಟೆ ಕಳೆಯಲಿದ್ದಾರೆ.

ಪ್ರಧಾನಿ ಮೋದಿ ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗಾಗಿ ಬೆಳಗ್ಗೆ 10.25ಕ್ಕೆ ಅಯೋಧ್ಯೆಯ ಏರ್​​ಪೋರ್ಟ್​ಗೆ ಆಗಮಿಸಲಿದ್ದಾರೆ. ಇವತ್ತು ಆಯೋಧ್ಯೆಯಲ್ಲಿ 5 ಗಂಟೆಗಳ ಕಾಲ ಇರುವ ಮೋದಿ ವಿವಿಧ ಕಾರ್ಯಗಳನ್ನು ನೆರವೇರಿಸಿ ಮಧ್ಯಾಹ್ನ 3.30ಕ್ಕೆ ದೆಹಲಿಯತ್ತ ಪ್ರಯಾಣ ಬೆಳಸಲಿದ್ದಾರೆ.

ಬೆಳಗ್ಗೆ 10:25ಕ್ಕೆ ಅಯೋಧ್ಯೆಯ ಏರ್​ಪೋರ್ಟ್​​ಗೆ ಆಗಮಿಸಿ 10:45ಕ್ಕೆ ರಾಮಮಂದಿರದ ಹೆಲಿಪ್ಯಾಡ್‌ಗೆ ತೆರಳಲಿದ್ದಾರೆ. ಅಲ್ಲಿಂದ ಬೆಳಗ್ಗೆ 10:55ಕ್ಕೆ ಸರಿಯಾಗಿ ರಾಮ ಜನ್ಮಭೂಮಿಗೆ ಆಗಮಿಸಲಿದ್ದಾರೆ. 11 ಗಂಟೆಯಿಂದ 12 ರವರೆಗೆ ಅಯೋಧ್ಯೆ ರಾಮಮಂದಿರವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಲಿದ್ದಾರೆ.

ಬಳಿಕ ಮಂದಿರದ ಕಾರ್ಮಿಕರ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಮಧ್ಯಾಹ್ನ 12:05 ರಿಂದ 12:55 ರವರೆಗೆ ಮೋದಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಪ್ರಾಣ ಪ್ರತಿಷ್ಠಾಪನೆಯಲ್ಲಿ 50 ನಿಮಿಷಗಳ ಕಾಲ ಮೋದಿ ಯಜಮಾನನಾಗಿ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

1 ರಿಂದ 2 ಗಂಟೆಗೆ ಮಂದಿರ ಆವರಣದಲ್ಲಿ ಆಯೋಜಿಸುವ ಸಾರ್ವಜನಿಕ ಸಭೆಯಲ್ಲಿ ಮಂದಿರವನ್ನು ಉದ್ದೇಶಿಸಿ ಭಾಷಣೆ ಮಾಡುವರು. 2:10ಕ್ಕೆ ಕುಬೇರ ತಿಲದ ಶಿವಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿ, ಕೊನೆಗೆ 3.30ರ ಸಮಯಕ್ಕೆ ಅಯೋಧ್ಯೆಯಿಂದ ಮೋದಿ ದೆಹಲಿಯತ್ತ ವಿಮಾನದ ಮೂಲಕ ಪ್ರಯಾಣ ಬೆಳಸಲಿದ್ದಾರೆ.

ಇದನ್ನೂ ಓದಿ : 500 ವರ್ಷಗಳ ಇತಿಹಾಸ ಮರು ಸೃಷ್ಟಿಗೆ ಕೌಂಟ್​ಡೌನ್ : ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಕ್ರಿಯೆ ಹೇಗಿರುತ್ತೆ..?

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here