Download Our App

Follow us

Home » ರಾಷ್ಟ್ರೀಯ » 500 ವರ್ಷಗಳ ಇತಿಹಾಸ ಮರು ಸೃಷ್ಟಿಗೆ ಕೌಂಟ್​ಡೌನ್ : ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಕ್ರಿಯೆ ಹೇಗಿರುತ್ತೆ..?

500 ವರ್ಷಗಳ ಇತಿಹಾಸ ಮರು ಸೃಷ್ಟಿಗೆ ಕೌಂಟ್​ಡೌನ್ : ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಕ್ರಿಯೆ ಹೇಗಿರುತ್ತೆ..?

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪಣೆಗೆ ಕ್ಷಣಗಣನೆ ಶುರುವಾಗಿದೆ. 70 ಎಕರೆಯಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ ರಾಮರಾಜ್ಯ ಎಲ್ಲರ ಗಮನ ಸೆಳೆಯುತ್ತಿದೆ. ಅಯೋಧ್ಯೆ ಮಧುವಣಗಿತ್ತಿಯಂತೆ ರೆಡಿಯಾಗಿದ್ದು, ಇಂದು ರಾಮಲಲ್ಲಾ ದರ್ಶನ ನೀಡಲಿದ್ದಾನೆ.

ಮಧ್ಯಾಹ್ನದ ಅಭಿಜಿನ್​ ಲಗ್ನದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದ್ದು, ಪ್ರಧಾನಿ ಮೋದಿ ಅಯೋಧ್ಯೆ ರಾಮಮಂದಿರ ಉದ್ಘಾಟಿಸಲಿದ್ದಾರೆ.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಕ್ರಿಯೆ ಹೇಗಿರುತ್ತೆ..?

ಶಿಲ್ಪಿ ಕೆತ್ತಿದ ಮೂರ್ತಿಗೆ ದೈವಿಕ ಶಕ್ತಿ ತುಂಬುವುದೇ ಪ್ರಾಣ ಪ್ರತಿಷ್ಠಾಪನೆ. ಗರ್ಭಗುಡಿಯಲ್ಲಿ ಕೂರಿಸಿರುವ ಬಾಲರಾಮನಿಗೆ ಶಾಸ್ತ್ರೋಕ್ತ ಪೂಜೆ ನಡೆಯಲಿದ್ದು, ವೇದಾಗಮ ಪಂಡಿತರು ಮಂತ್ರಘೋಷ ಮೊಳಗಿಸಲಿದ್ದಾರೆ. ಮಂತ್ರಘೋಷ, ಪೂಜೆ ನಂತರ ವಿಗ್ರಹಣ ಪೂರ್ಣ ರೂಪ ಅನಾವರಣವಾಗಲಿದೆ.

ವಿಗ್ರಹದ ಕಣ್ಣಿಗೆ ಕಟ್ಟಿರುವ ಬಟ್ಟೆ ತೆಗೆದು ಪೂಜಾ ಕಾರ್ಯ ಆರಂಭ ಮಾಡಲಿದ್ದು, ಪ್ರಧಾನಿ ಮೋದಿ ಖುದ್ದು ರಾಮಲಲ್ಲಾ ಹಣೆಗೆ ತಿಲಕ ಇಡಲಿದ್ದಾರೆ. ವೈದಿಕರು ಕಣ್ಣಿಗೆ ನೇತ್ರ ಬಿಂದು ಇಡುವ ಪ್ರಕ್ರಿಯೆ ನೆರವೇರಿಸಲಿದ್ದಾರೆ. ಕನ್ನಡಿಯನ್ನು ರಾಮನ ಮುಖಕ್ಕೆ ಎದುರಾಗಿ ಹಿಡಿದು ಅದರಲ್ಲಿ ಮೂರ್ತಿ ದರ್ಶನ ಪಡೆಯಲಿದ್ದಾರೆ.

ನಂತರ ಬಾಲ ರಾಮ ಮೂರ್ತಿಗೆ ಅಭಿಷೇಕ ಆರಂಭವಾಗಲಿದೆ. ಮಹಾಮಸ್ತಕಾಭಿಷೇಕ ನೆರವೇರಿಸಿದ ನಂತರ ಮೂರ್ತಿಗೆ ಸಿಂಗಾರ ಮಾಡಲಿದ್ದಾರೆ. ಆಭರಣಗಳಿಂದ ಅಲಂಕರಿಸಿ, ಶಿರದ ಮೇಲೆ ಕಿರೀಟ ಧಾರಣೆಯಾಗಲಿದೆ.

ಇದನ್ನೂ ಓದಿ : ಅಯೋಧ್ಯೆಗೆ ತೆರಳಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರ ಕುಟುಂಬ..!

Leave a Comment

DG Ad

RELATED LATEST NEWS

Top Headlines

ವ್ಯವಸಾಯದ ಸಮಸ್ಯೆ ಸಾರುವ ‘ಕಬಂಧ’ ಚಿತ್ರಕ್ಕೆ ಹಾರರ್ ಟಚ್..!

ಸತ್ಯನಾಥ್ ನಿರ್ದೇಶನದ ’ಕಬಂಧ’ ಚಿತ್ರ ಕುಂಜಾರ ಫಿಲಂಸ್ ಲಾಂಛನದಲ್ಲಿ ರೆಡಿಯಾಗಿದೆ. ಈ ಚಿತ್ರದ ಗೆಳೆತನ ಕುರಿತಾದ ಲಿರಿಕಲ್ ಸಾಂಗ್ ರಿಲೀಸ್ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಕೆ.ಕಲ್ಯಾಣ್

Live Cricket

Add Your Heading Text Here