Download Our App

Follow us

Home » ರಾಜಕೀಯ » ಬಿಜೆಪಿಗೆ ಪ್ರಜ್ವಲ್ ರೇವಣ್ಣ ಕರ್ಮಕಾಂಡ ಕಾಣಿಸುತ್ತಿಲ್ವಾ? ಯಾರು ತುಟಿ ಬಿಚ್ಚುತ್ತಿಲ್ಲ ಯಾಕೆ? : ಲಕ್ಷ್ಮೀ ಹೆಬ್ಬಾಳ್ಕರ್..!

ಬಿಜೆಪಿಗೆ ಪ್ರಜ್ವಲ್ ರೇವಣ್ಣ ಕರ್ಮಕಾಂಡ ಕಾಣಿಸುತ್ತಿಲ್ವಾ? ಯಾರು ತುಟಿ ಬಿಚ್ಚುತ್ತಿಲ್ಲ ಯಾಕೆ? : ಲಕ್ಷ್ಮೀ ಹೆಬ್ಬಾಳ್ಕರ್..!

ಬೆಳಗಾವಿ : ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರತಿಕ್ರಿಯಿಸಿ, ಇಷ್ಟೆಲ್ಲಾ ನಡೆಯುತ್ತಿದ್ದರು ಬಿಜೆಪಿ ನಾಯಕರು ಮಾತಾಡುತ್ತಿಲ್ಲ. ಹುಬ್ಬಳ್ಳಿಯ ಘಟನೆಯನ್ನ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಿದ ಧೀಮಂತ ಬಿಜೆಪಿ ನಾಯಕರಿಗೆ ಈ ಹೆಣ್ಣು ಮಕ್ಕಳು ಕಾಣಿಸುತ್ತಿಲ್ಲ. ಪ್ರಕರಣ ಮುಚ್ಚಲು ಹೋಗುತ್ತಿದ್ದಾರೆ. ಇದು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತೆ. ಯಾಕೆ  ಮೌನ ವಹಿಸಿದ್ದಾರೆ? ಬಿಜೆಪಿಗೆ ಪ್ರಜ್ವಲ್ ರೇವಣ್ಣ ಕರ್ಮಕಾಂಡ ಕಾಣಿಸುತ್ತಿಲ್ವಾ? ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಗುಡುಗಿದ್ದಾರೆ.

ಉಡುಪಿಯಲ್ಲಿ ವಿದ್ಯಾರ್ಥಿಗಳ ಶೌಚಾಲಯದಲ್ಲಿ ವಿಡಿಯೋ ಮಾಡಿದ್ರೂ ಅಂತಾ ತನಿಖೆಗೆ ವಹಿಸಿದ್ದೆವು. ರಾಷ್ಟ್ರೀಯ ಆಯೋಗದವರು ಎದ್ದು ಬಿದ್ದು ಆಗ ಓಡಿ ಬಂದ್ರೂ. ಈಗ ಅವರೆಲ್ಲಾ ಎಲ್ಲಿದ್ದಾರೆ? ಇದೇನಾ ಬಿಜೆಪಿ ಸಂಸ್ಕೃತಿ? ಆರ್.ಅಶೋಕ್ ಅವರು ಇದರ ಬಗ್ಗೆ ಮಾತಾಡದೇ ಅವರ ಪಕ್ಷದವರನ್ನ ಕೇಳಿ ಅಂತಾರೆ. ಅಶೋಕ, ವಿಜಯೇಂದ್ರ ಅವರೇ ನಿಮ್ಮ ಪೊಲಿಟಿಕಲ್ ಸ್ಟ್ಯಾಂಡ್ ಏನು? ಇದರ ಬಗ್ಗೆ ಯಾರು ತುಟಿ ಬಿಚ್ಚುತ್ತಿಲ್ಲ ಯಾಕೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿ ನಡೆದ ಎರಡ್ಮೂರು ಘಟನೆಯನ್ನ ಮೋದಿಯವರು ಉಲ್ಲೇಖ ಮಾಡ್ತಾರೆ. ಈ ಪ್ರಕರಣದ ಬಗ್ಗೆ ಯಾಕೆ ಮಾತಾಡಲಿಲ್ಲ, ನಿಮ್ಮ ಪಕ್ಕದಲ್ಲೇ ಆ ಸಂಸದರನ್ನ ಪಕ್ಕದಲ್ಲಿ ಕುಡಿಸಿಕೊಳ್ತಿರಿ.
ಬೇಟಿ ಬಚಾಚೋ, ಬೇಟಿ ಪಡಾವೋ ಅಂತಿರಾ ಇದು ನಿಮ್ಮ ರಾಜಕೀಯ ಸ್ಲೋಗನ್ ಅಷ್ಟೆನಾ ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಹೆಬ್ಬಾಳ್ಕರ್ ಅವರು ತುರ್ತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಇಡೀ ವಿಶ್ವವೇ ತಲೆ ತಗ್ಗಿಸುವ, ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ ನಮ್ಮ ರಾಜ್ಯದಲ್ಲಿ ಆಗಿದೆ. ನಮಗೆಲ್ಲಾ ಇಂದು ಬಹಳಷ್ಟು ಖೇಧ ಅನಿಸುತ್ತೆ. ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಹರಿದಾಡುತ್ತಿವೆ. ರಾಜ್ಯ ತಲೆ ತಗ್ಗಿಸುವ ಕೆಲಸ ಸಂಸದ ಪ್ರಜ್ವಲ್ ರೇವಣ್ಣ ಮಾಡಿದ್ದಾರೆ.

ನಾವು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಧ್ವನಿ ಎತ್ತುತ್ತಿದ್ದೇನೆ‌. ಸಾಮಾಜಿಕ ಬದ್ಧತೆಯಿಂದ ಹೆಣ್ಣು ಮಕ್ಕಳ ಪರವಾಗಿ ಧ್ವನಿ ಎತ್ತಬೇಕಿದೆ.
ಬಿಜೆಪಿಯವರು ಪ್ರಜ್ವಲ್ ರೇವಣ್ಣ ಅವರನ್ನ ರಕ್ಷಣೆ ಮಾಡದಿದ್ರೇ ಉನ್ನತ ತನಿಖೆ ಮಾಡಿಸಿ. ನಮಗೆ ಮಾಹಿತಿ ಬರುತ್ತಿದ್ದಂತೆ ಕೂಡಲೇ ಎಸ್‌ಐಟಿ ರಚನೆ ಮಾಡಿದ್ದೇವೆ. ತನಿಖೆ ಆಗುತ್ತೆ ಕಠಿಣ ಶಿಕ್ಷೆ ಆಗಬೇಕು. ನಮ್ಮ ಸರ್ಕಾರ ಮಾಡುತ್ತೆ. ಹುಬ್ಬಳ್ಳಿಯಲ್ಲಿ ನಡೆಯಬಾರದ ಘಟನೆ ನಡೆದಿದೆ ಎಲ್ಲರೂ ಖಂಡಿಸಿದ್ದೇವೆ. ಮಂಡ್ಯದ ಸೊಸೆ ಅಂತಿದ್ದ ಸುಮಲತಾ ಅವರು ಈಗ ಎಲ್ಲಿದ್ದಾರೆ‌. ಬಿಜೆಪಿಯವರು ತಮ್ಮ ಪೊಲಿಟಿಕ್ ಸ್ಟ್ಯಾಂಡ್ ಹೇಳಬೇಕು. ಜೆಡಿಎಸ್ ಜೊತೆಗೆ ಮೈತ್ರಿ ಮುಂದುವರೆಸುತ್ತಾರಾ ಅಥವಾ ಮುರಿದುಕೊಳ್ತಾರಾ ಸ್ಪಷ್ಟಪಡಿಸಲಿ. ರೇವಣ್ಣ ಅವರು ಮುಖ್ಯ ಆರೋಪಿ, ಪ್ರಜ್ವಲ್ ಎರಡನೇ ಆರೋಪಿ ಮಾಡಿದ್ದಾರೆ. ನನಗೆ ವಿದೇಶದಿಂದ ಪೋನ್ ಕರೆಗಳು ಬರುತ್ತಿವೆ. ಎಷ್ಟು ಹೆಣ್ಣು ಮಕ್ಕಳ ಜೊತೆಗೆ ಹೀಗಾಗಿದೆ ಅಂತಾ ಎಣಿಸಿಕೊಂಡು ಕೂಡಲು ಆಗಲ್ಲ. ಅವರು ವಿಕೃತ ಕಾಮಿಗಳು ಎಂದು ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿಯವರೇ ಉಪ್ಪು ತಿಂದವರು ನೀರು ಕುಡಿಬೇಕು ಅಂತಾ ಹೇಳಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಪ್ರಜ್ವಲ್ ರೇವಣ್ಣ ನನ್ನ ಮಗ ಅಂತಾ ಪ್ರಚಾರ ಮಾಡಿದ್ದಾರೆ. ಮಹಿಳೆ ಹೋಗಿ ಕೇಸ್ ಕೊಟ್ಟಿದ್ದು ಸುಳ್ಳಾ? ರಾಜಕೀಯ ಅಪಪ್ರಚಾರ, ರಾಜಕೀಯಕ್ಕಾಗಿ ಮಾಡ್ತಿಲ್ಲ. ಇದರ ಬಗ್ಗೆ ಬಿಜೆಪಿಯವರು ಏನ್ ಹೇಳ್ತಾರೆ. ಪ್ರಕರಣದ ಬಗ್ಗೆ ಸಿಎಂ ಅವರ ಜೊತೆಗೆ ನಾನು ಮಾತಾಡಿದ್ದೇನೆ.
ಇಬ್ಬರು ಮಹಿಳಾ ಅಧಿಕಾರಿಗಳು ಇದ್ದಾರೆ. ತನಿಖೆ ಮಾಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಏನೂ ಮಾಡಬೇಕು ಅದನ್ನ ಮಾಡ್ತೇವೆ. ಮಂಗಲಾ ಅಂಗಡಿಯವರು ಈ ವಿಚಾರ ಖಂಡಿಸಬೇಕು.
ಹೊರಗೆ ಬಂದು ಸಾವಿರಾರು ಜನರನ್ನ ಕರೆದುಕೊಂಡು ಹೋರಾಟ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಅಪಾರ್ಟ್​ಮೆಂಟ್​​ನ ರೂಫ್​ನಲ್ಲಿ ಸಿಲುಕಿದ 7 ತಿಂಗಳ ಕಂದಮ್ಮ : ಸ್ಥಳೀಯರಿಂದ ರೋಚಕ ರಕ್ಷಣೆ, ವಿಡಿಯೋ ವೈರಲ್​..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here