Download Our App

Follow us

Home » ಅಪರಾಧ » ಪ್ರಜ್ವಲ್ ರೇವಣ್ಣ ಇಂದು ಮಂಗಳೂರು ಏರ್ಪೋರ್ಟ್​ಗೆ ಆಗಮಿಸುವ ಸಾಧ್ಯತೆ..!

ಪ್ರಜ್ವಲ್ ರೇವಣ್ಣ ಇಂದು ಮಂಗಳೂರು ಏರ್ಪೋರ್ಟ್​ಗೆ ಆಗಮಿಸುವ ಸಾಧ್ಯತೆ..!

ಮಂಗಳೂರು : ಸಂಸದ ಪ್ರಜ್ಚಲ್ ರೇವಣ್ಣ ಇಂದು ಮಂಗಳೂರು ಏರ್ಪೋರ್ಟ್​ಗೆ ಆಗಮಿಸುವ ಸಾಧ್ಯತೆಯಿದೆ. ಅಪ್ಪ ಅರೆಸ್ಟ್ ಆದ ಬೆನ್ನಲ್ಲೇ ಪ್ರಜ್ವಲ್​ ರೇವಣ್ಣ ರಿಟರ್ನ್​ ಆಗುವ ಸಾಧ್ಯತೆಗಳಿವೆ. ಮಂಗಳೂರು ಏರ್​​ಪೋರ್ಟ್​ಗೆ ಅಬುದಾಬಿ, ದುಬೈ, ಕುವೈತ್​​ನಿಂದ ಸಂಜೆವರೆಗ 4 ವಿಮಾನ ಬರಲಿವೆ. ಈ ನಾಲ್ಕು ವಿಮಾನಗಳಲ್ಲಿ ಒಂದರಲ್ಲಿ ಪ್ರಜ್ವಲ್​ ಬರುವ ಸಾಧ್ಯತೆಯಿದೆ.

ಈಗಾಗಲೇ ಪ್ರಜ್ವಲ್​ ರೇವಣ್ಣ ವಿರುದ್ಧ ಲುಕ್​ಔಟ್ ನೋಟಿಸ್ ಜಾರಿಯಾಗಿದ್ದು, ಏರ್ಪೋರ್ಟ್ ಇಮಿಗ್ರೇಷನ್ ಬಳಿಯೇ ಪ್ರಜ್ವಲ್​​ನನ್ನು ಬಂಧಿಸುವ ಸಾಧ್ಯತೆಯಿದೆ. ಈಗಷ್ಟೇ ಅಬುದಾಬಿಯಿಂದ ಲ್ಯಾಂಡ್ ಆದ ವಿಮಾನದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಆಗಮಿಸಲಿಲ್ಲ. ಇಂದು ಭಾರತಕ್ಕೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆಯಿದೆ. ಕೊಚ್ಚಿ, ಗೋವಾ, ಬೆಂಗಳೂರು ಏರ್​ಪೋರ್ಟ್​ಗಳ ಮೇಲೂ SIT ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ಯಾವುದಾದರು 4 ವಿಮಾನ ನಿಲ್ದಾಣಕ್ಕೆ ಬರೋ ಸಾಧ್ಯತೆಯಿದ್ದು, ಯಾವುದೇ ಏರ್ಪೋರ್ಟ್ ಗೂ ಬಂದರೂ ಅಲ್ಲೇ ಬಂಧನ ಪ್ರಕ್ರಿಯೆ ನಡೆಯಲಿದೆ. ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ಠಾಣೆಗೆ ಹಾಜರು ಪಡಿಸಲಿದ್ದಾರೆ. ಬಳಿಕ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿ, ನಂತರ ಬೆಂಗಳೂರಿಗೆ ಶಿಫ್ಟ್​ ಮಾಡಲಿದ್ದಾರೆ.

ಇದನ್ನೂ ಓದಿ : ಸಂತ್ರಸ್ತೆ ಕಿಡ್ನಾಪ್ ಪ್ರಕರಣ : SIT ಮುಂದೆ ಹೆಚ್​.ಡಿ ರೇವಣ್ಣ ಹೇಳಿದ್ದೇನು..?

Leave a Comment

DG Ad

RELATED LATEST NEWS

Top Headlines

ಸ್ಟಾರ್ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ನಡೆಯುತ್ತಿದ್ಯಾ ಪಿತೂರಿ?

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್

Live Cricket

Add Your Heading Text Here