Download Our App

Follow us

Home » ಜಿಲ್ಲೆ » ತುಮಕೂರು : ಪೊಲೀಸರಂತೆ ನಟಿಸಿ ಮಹಿಳೆಯ ಮಾಂಗಲ್ಯ ಸರವನ್ನ ಎಗರಿಸಿದ ಖದೀಮರು..!

ತುಮಕೂರು : ಪೊಲೀಸರಂತೆ ನಟಿಸಿ ಮಹಿಳೆಯ ಮಾಂಗಲ್ಯ ಸರವನ್ನ ಎಗರಿಸಿದ ಖದೀಮರು..!

ತುಮಕೂರು : ಪೊಲೀಸರು ಅಂತಾ ಹೇಳಿಕೊಂಡು ಮಹಿಳೆಯ ಮಾಂಗಲ್ಯ ಸರವನ್ನ ಖದೀಮರು ಎಗರಿಸಿರುವ ಘಟನೆ ಜಿಲ್ಲೆಯ ಶಿರಾ ನಗರದಲ್ಲಿ ನಡೆದಿದೆ. ಮಹಿಳೆಯೊಬ್ಬರು 1.50 ಲಕ್ಷ ರೂ. ಮೌಲ್ಯದ 48 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದಾರೆ.

ತಾಲೂಕಿನ ಕಡವಿಗೆರೆ ಗ್ರಾಮದ ಅಶ್ವತ್ಥಮ್ಮ ಮಾಂಗಲ್ಯ ಸರ ಕಳೆದುಕೊಂಡವರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಾತ್ರೆಗಳನ್ನು ತೆಗೆದುಕೊಂಡು ಸ್ಥಳೀಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗ ಹೋಗುತ್ತಿರುವ ವೇಳೆ ಮಹಿಳೆಯನ್ನ ತಡೆದ ಕಳ್ಳರು ನಾವು ಪೊಲೀಸರು ಮುಂದೆ ಗಲಾಟೆ ನಡಿತಾಯಿದೆ.

ನಿಮ್ಮ ಸರವನ್ನ ಬ್ಯಾಗ್​ನಲ್ಲಿ ಇಟ್ಟುಕೊಳ್ಳಿ ಎಂದು ಪುಸಲಾಯಿಸಿ ಪೇಪರ್ ನಲ್ಲಿ ಸರ ಸುತ್ತಿಕೊಡುವ ನೆಪ ಮಾಡಿ ಮಹಿಳೆಯ ಗಮನ ಬೇರೆ ಕಡೆ ಹರಿಸಿ ಮಾಂಗಲ್ಯದೊಂದಿಗೆ ಎಸ್ಕೇಪ್ ಆಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮೊಸ ಹೊಗಿದ್ದು ಅರಿವಾದ ಅಶ್ವಥಮ್ಮ ಶಿರಾ ನಗರ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.

ಇದನ್ನೂ ಓದಿ  : ತುಮಕೂರು : ವಿವಾಹಿತ ಪುರುಷನೊಂದಿಗೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ..!

Leave a Comment

DG Ad

RELATED LATEST NEWS

Top Headlines

ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಶಸ್ತ್ರ ತ್ಯಜಿಸಿ ಶರಣಾದ ನಕ್ಸಲರು – ಮುಂದಿನ ಕಾನೂನು ಪ್ರಕ್ರಿಯೆ ಏನಿರಲಿದೆ?

ಬೆಂಗಳೂರು: ‘ಬಂದೂಕಿನ ಮೂಲಕ ನ್ಯಾಯ’ ಪಡೆಯಲು ಪಶ್ಚಿಮ ಘಟ್ಟದಲ್ಲಿ ದಶಕಗಳ ಕಾಲ ಹೋರಾಟ ನಡೆಸಿದ್ದ 6 ನಕ್ಸಲರು ಶಸ್ತ್ರತ್ಯಾಗ ಮಾಡಿದ್ದಾರೆ. ಮುಖ್ಯವಾಹಿನಿಗೆ ಬರಲು ನಿರ್ಧರಿಸಿ ನಿನ್ನೆ ಸಿಎಂ

Live Cricket

Add Your Heading Text Here