ತುಮಕೂರು : ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ವಿವಾಹಿತ ಪುರುಷನೊಂದಿಗೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು. ಮಾವತ್ತೂರು ಕೆರೆಗೆ ಬಿದ್ದಿರುವ ಶಂಕೆ ಮೇಲೆ ಹುಡುಕಾಟ ನಡೆಸಿದ್ದು, ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಬ್ಬರ್ ಬೋಟ್ ಬಳಸಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ನಡೆಸಿದ್ದಾರೆ.
ಕೆರೆ ಬಳಿ ಕಾರು ನಿಲ್ಲಿಸಿ, ಮೊಬೈಲ್ ಗಳನ್ನು ಕಾರಲ್ಲಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ವಿವಾಹಿತ ಪುರುಷ ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ ಜೊತೆ ನೀರಿಗೆ ಹಾರಿರುವ ಮಾಹಿತಿಯಿದೆ. ಕಳೆದ 3 ದಿನಗಳ ಹಿಂದೆ ಮನೆಯಿಂದ ಇವರು ನಾಪತ್ತೆಯಾಗಿದ್ದರು.
ಇಬ್ಬರದ್ದೂ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿ ಪ್ರೇಮಕ್ಕೆ ಕುಟುಂಬದವರ ವಿರೋಧ ಇದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಯುವತಿಯ ಶವ ಪತ್ತೆಯಾಗಿದ್ದು, ಕೊರಟಗೆರೆ ಸಿಪಿಐ ಅನಿಲ್, ಕೋಳಾಲ ಪಿಎಸ್‌ಐ ರೇಣುಕಾ ಯಾದವ್, ಯೋಗೇಶ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಕೊಳಾಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ : ರಾಜ್ಯ ಸರ್ಕಾರ 6 ತಿಂಗಳು ನಡೆಯುತ್ತಾ, 3 ತಿಂಗಳು ನಡೆಯುತ್ತಾ ಗೊತ್ತಿಲ್ಲ : ಕೇಂದ್ರ ಸಚಿವ ವಿ ಸೋಮಣ್ಣ..!