Download Our App

Follow us

Home » ಮೆಟ್ರೋ » ಬೆಂಗಳೂರು : ಮಹಿಳೆಯರ ಮತದಾನಕ್ಕೆ ಉತ್ತೇಜನ ನೀಡಲು ಸಿದ್ದಗೊಂಡಿವೆ ಪಿಂಕ್‌ ಬೂತ್​ಗಳು..!

ಬೆಂಗಳೂರು : ಮಹಿಳೆಯರ ಮತದಾನಕ್ಕೆ ಉತ್ತೇಜನ ನೀಡಲು ಸಿದ್ದಗೊಂಡಿವೆ ಪಿಂಕ್‌ ಬೂತ್​ಗಳು..!

ಬೆಂಗಳೂರು : ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಮತದಾನದ ಪ್ರಮಾಣ ಪ್ರತಿಬಾರಿ ಕಡಿಮೆಯಾಗುತ್ತಿರುವುದು ಚುನಾವಣಾ ಆಯೋಗಕ್ಕೆ ತಲೆನೋವಾಗಿ ಪರಣಮಿಸಿದೆ.

ಇದನ್ನು ಹೋಗಲಾಡಿಸುವ ಒಂದು ಪ್ರಯತ್ನವಾಗಿ ರಾಜ್ಯ ಚುನಾವಣಾ ಆಯೋಗವು ಪಿಂಕ್ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಿದೆ. ಮಹಿಳಾ ಮತದಾರರನ್ನು ಸೆಳೆಯುವುದು ಪಿಂಕ್ ಮತಗಟ್ಟೆ ಸ್ಥಾಪಿಸುವ ಹಿಂದಿನ ಉದ್ದೇಶವಾಗಿದೆ.

ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಹಿಳೆಯರ ಮತದಾನಕ್ಕೆ ಉತ್ತೇಜನ ನೀಡಲು ಪಿಂಕ್‌ ಬೂತ್​ಗಳು ರೆಡಿಯಾಗಿದೆ. ಗುಲಾಬಿ ಬಣ್ಣದ ಪರದೆಗಳು, ಬ್ಯಾನರ್​​ಗಳಿಂದ ಸಿಂಗಾರಗೊಂಡಿವೆ. ರಾಜಾಜಿನಗರದ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಪಿಂಕ್‌ ಮತಗಟ್ಟೆ ಸಿದ್ಧಗೊಂಡಿದೆ.

ಮಹಿಳೆಯರು ಹೆಚ್ಚಾಗಿರುವ ವಾರ್ಡ್​ಗಳಲ್ಲಿ ಪಿಂಕ್ ಬೂತ್ ನಿರ್ಮಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವಿಧಾನಸಭಾ ಸಭಾ ಕ್ಷೇತ್ರದಲ್ಲಿ 5 ಪಿಂಕ್ ಬೂತ್ ನಿರ್ಮಿಸಲಾಗಿದ್ದು. ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 140 ಪಿಂಕ್ ಬೂತ್ ಸ್ಥಾಪನೆ ಮಾಡಲಾಗಿದೆ.

ಇದನ್ನೂ ಓದಿ : ನಿಮ್ಮ ವೋಟರ್ ಐಡಿ ಕಳೆದುಹೋಗಿದೆಯೇ? ಟೆನ್ಷನ್ ಬೇಡ – ಈ ದಾಖಲೆಗಳನ್ನು ನೀಡಿ ಮತ ಚಲಾಯಿಸಬಹುದು..!

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here