ನವದೆಹಲಿ : ಚಂಡಮಾರುತದ ಭೀಕರ ಆರ್ಭಟಕ್ಕೆ ಭಾರೀ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ಫಿಲಿಪೈನ್ಸ್‌ನಲ್ಲಿ ಕನಿಷ್ಟ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ನೂರಾರು ಮಂದಿ ನಾಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಫಿಲಿಪೈನ್ಸ್‌ನಲ್ಲಿ ಉಷ್ಣವಲಯದ ‘ಟ್ರಾಮಿ’ ಚಂಡಮಾರುತದಿಂದ ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಸದ್ಯದ ವರದಿ ಪ್ರಕಾರ ಸತ್ತವರ ಸಂಖ್ಯೆ ಕನಿಷ್ಟ 150ರ ಗಡಿ ದಾಟಿದೆ. ಈ ಅಂಕಿ ಅಂಶ ಹೆಚ್ಚಾಗುವ ಸಾಧ್ಯತೆ ಇದೆ. ಇದಲ್ಲದೇ ಹಲವರು ನಾಪತ್ತೆಯಾಗಿರುವ ಸುದ್ದಿ ಬೆಳಕಿಗೆ ಬಂದಿದೆ.
ಈ ವರ್ಷ ಫಿಲಿಪೈನ್ಸ್‌ಗೆ ಅಪ್ಪಳಿಸಿದ 11 ನೇ ಟೈಫೂನ್ ಟ್ರಾಮಿ ಚಂಡಮಾರುತದಿಂದ ವಿನಾಶಕಾರಿ ಪ್ರವಾಹಗಳು ಮತ್ತು ಭೂಕುಸಿತ ಉಂಟಾಗಿದ್ದು, ಸಾವಿರಾರು ಮನೆಗಳು, ಕಟ್ಟಡಗಳು ಧರಾಶಾಹಿಯಾಗಿ ಲಕ್ಷಾಂತರ ಮಂದಿ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಲುಜಾನ್ ದ್ವೀಪದಾದ್ಯಂತ, ವಿಶೇಷವಾಗಿ ಬಿಕೋಲ್ ಮತ್ತು ಕ್ಯಾಲಬರ್ಜಾನ್ ಪ್ರದೇಶಗಳು ಮತ್ತು ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್‌ನ ಪ್ರದೇಶಗಳಲ್ಲಿ ಭಾರೀ ವಿನಾಶ ಉಂಟಾಗಿದೆ.
ಇನ್ನು ಚಂಡಮಾರುತದಿಂದ ಪ್ರವಾಹದ ನೀರು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸೇತುವೆಗಳಿಗೆ ಭಾರಿ ಹಾನಿಯನ್ನುಂಟುಮಾಡಿದೆ, ಇದರಿಂದಾಗಿ ಸಾರಿಗೆ ಸ್ಥಗಿತಗೊಂಡಿದೆ ಮತ್ತು ವಸತಿ ಪ್ರದೇಶಗಳಲ್ಲಿ ಜನರ ಮನೆಗಳಲ್ಲಿ ಮಣ್ಣು ಸಂಗ್ರಹವಾಗಿದೆ. ಸಾವಿರಾರು ಮನೆಗಳು, ಕಟ್ಟಡಗಳು ಕುಸಿತಗೊಂಡು ಭೀಕರತೆ ಸೃಷ್ಟಿಸಿದೆ.
ಇದನ್ನೂ ಓದಿ : ಬಳ್ಳಾರಿ ಜೈಲಿಗೆ ಆಗಮಿಸಿದ ದರ್ಶನ್ ಕುಟುಂಬಸ್ಥರು.. ಇಂದೇ ರಿಲೀಸ್ ಆಗ್ತಾರಾ ದಾಸ?