ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ಗೆ ಬಿಗ್ ರಿಲೀಫ್ ಸಿಕ್ಕಿದ್ದು, 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಇದೀಗ ದರ್ಶನ್ನ್ನು ಸಂಜೆ ವೇಳೆಗೆ ರಿಲೀಸ್ ಮಾಡಲು ಇಮೇಲ್ ಮೂಲಕ ಕೋರ್ಟ್ ಆದೇಶ ಪ್ರತಿ ರವಾನೆ ಮಾಡಿದೆ.
ಬಳ್ಳಾರಿ ಸೆಂಟ್ರಲ್ ಜೈಲ್ಗೆ ವಿಚಾರಣಾ ಕೋರ್ಟ್ನಿಂದ ರಿಲೀಸ್ ಆರ್ಡರ್ ರವಾನೆ ಮಾಡಿದ್ದು, ನ್ಯಾಯಾಧೀಶರಾದ ಜೈಶಂಕರ್ರಿಂ ರಿಲೀಸ್ ಆರ್ಡರ್ ಕಳುಹಿಸಿದ್ದಾರೆ. ಪಾಸ್ಪೋರ್ಟ್ ಸರೆಂಡರ್, ಇಬ್ಬರ ಶ್ಯೂರಿಟಿ ನೀಡಿ ದರ್ಶನ್ ಕುಟುಂಬದ ಸದಸ್ಯರು ಕೋರ್ಟ್ ಷರತ್ತು ಪೂರೈಸಿದ್ದಾರೆ. ಹೀಗಾಗಿ ಮೇಲ್ ಮೂಲಕ ರಿಲೀಸ್ ಆರ್ಡರ್ ರವಾನೆ ಮಾಡಲಾಗಿದೆ.
ಆದೇಶ ಪ್ರತಿ ಬಳ್ಳಾರಿ ಜೈಲ್ ಅಧಿಕಾರಿ ಕೈಗೆ ಸಿಗ್ತಿದ್ದಂತೆ ದರ್ಶನ್ನ್ನು ಬಿಡುಗಡೆ ಮಾಡಲಿದ್ದಾರೆ. ದರ್ಶನ್ ಆಪ್ತರಾಗಿರುವ ನಟ ಧನ್ವೀರ್ ಹಾಗೂ ಸಹೋದರ ದಿನಕರ್ ತೂಗದೀಪ್ ಶ್ಯೂರಿಟಿ ಕೊಟ್ಟಿದ್ದಾರೆ. ದಿನಕರ್ ಅವರು ಮಾಗಡಿ ರಸ್ತೆ, ರಾಜಾಜಿನಗರ ಆಸ್ತಿ ಶ್ಯೂರಿಟಿ ಕೊಟ್ಟಿದ್ದಾರೆ. ದರ್ಶನ್ ಬೇಲ್ಗಾಗಿ 2 ಲಕ್ಷದ ಬಾಂಡ್ ಶ್ಯೂರಿಟಿ ನೀಡಿದ್ದಾರೆ. ನವೆಂಬರ್ 20ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಸಂಜೆ ವೇಳೆಗೆ ದರ್ಶನ್ ರಿಲೀಸ್ ಆಗುವ ಸಾಧ್ಯತೆಯಿದೆ.
ಇದನ್ನೂ ಓದಿ : ದರ್ಶನ್ ಇವತ್ತೇ ರಿಲೀಸ್ ಆಗ್ತಾರಾ? – ಹಲವು ವಿಷಯ ಬಿಚ್ಚಿಟ್ಟ ದರ್ಶನ್ ಪರ ವಕೀಲ..!