Download Our App

Follow us

Home » ಜಿಲ್ಲೆ » ಸ್ಕೂಟರ್ ಚಲಾಯಿಸುತ್ತಲೇ ಮೀಟಿಂಗ್​ಗೆ ಅಟೆಂಡ್ ಆದ ವ್ಯಕ್ತಿ : ವಿಡಿಯೋ ವೈರಲ್..!

ಸ್ಕೂಟರ್ ಚಲಾಯಿಸುತ್ತಲೇ ಮೀಟಿಂಗ್​ಗೆ ಅಟೆಂಡ್ ಆದ ವ್ಯಕ್ತಿ : ವಿಡಿಯೋ ವೈರಲ್..!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಕೇಳುವುದೇ ಬೇಡ ಎಲ್ಲೆಡೆ ಟ್ರಾಫಿಕ್​ದೇ ಸಮಸ್ಯೆ. ಅದರಲ್ಲೂ ಸಮಯಕ್ಕೆ ಸರಿಯಾಗಿ ಆಫೀಸ್​ಗೆ ತಲುಪಬೇಕೆಂಬ ಉದ್ಯೋಗಿಗಳ ಗೋಳು ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎನ್ನುವುದಕ್ಕೆ ಇಲ್ಲೊಂದು ಘಟನೆ ಸಾಕ್ಷಿ ಎಂಬಂತಿದ್ದು, ವ್ಯಕ್ತಿಯೋರ್ವ ತನ್ನ ಸ್ಕೂಟರ್ ಓಡಿಸುತ್ತಲೇ ಲ್ಯಾಪ್ ಟಾಪ್ ನಲ್ಲಿ ಕಚೇರಿ ಮೀಟಿಂಗ್ ಪಾಲ್ಗೊಂಡಿರುವುದು ಕಂಡುಬಂದಿದೆ.

ಪೀಕ್ ಬೆಂಗಳೂರು ಎಂಬ ಎಕ್ಸ್  ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಚಲಾಯಿಸುತ್ತಲೇ ಲ್ಯಾಪ್ ಟಾಪ್ ಅನ್ನು ಓಪನ್ ಮಾಡಿ ಕೆಳಗಿಟ್ಟುಕೊಂಡು ಕಚೇರಿ ಮೀಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಸುಮಾರು 11 ಸೆಕೆಂಡುಗಳ ಚಿಕ್ಕ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇದೊಂದು ಕಂಪನಿಯ ಟೀಂ ಮೀಟಿಂಗ್ ಎಂದು ಹೇಳಲಾಗುತ್ತಿದೆ.

ಇನ್ನು ವಾಹನ ಚಲಾಯಿಸುವಾಗ ಮೊಬೈಲ್, ಹೆಡ್ ಫೋನ್ ಬಳಸಿಕೊಂಡು ಸಂಚಾರ ನಿಯಮ ಉಲ್ಲಂಘಿಸುವುದು ಅಪರಾಧ. ಹೀಗಾಗಿ ಇದೀಗ ಈ ವಿಡಿಯೋದ ಕುರಿತು ಪರ- ವಿರೋಧಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ ಎಂದೇ ಹೇಳಬಹುದು.

 

ಇದನ್ನೂ ಓದಿ : ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಟ್ಯಾಂಕರ್ : ಅಸಲಿಗೆ ಆಗಿದ್ದೇನು?

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here