ಮೈಸೂರು : ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆ ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀರಾಮನ ಹೆಸರಿನ ಲಕ್ಷದೀಪೋತ್ಸವಕ್ಕೆ ಮೈಸೂರು ಪೊಲೀಸರು ಅನುಮತಿಯನ್ನ ರದ್ದುಗೊಳಿಸಿದ್ದಾರೆ.
ಮೈಸೂರಿನ ಅಶೋಕ ರಸ್ತೆಯಲ್ಲಿ ಲಕ್ಷ ದೀಪೋತ್ಸವ ಸಿದ್ಧತೆ ಆಗಿತ್ತು, ಪೊಲೀಸರಿಂದ ಸ್ಥಳೀಯರು ಅನುಮತಿಯನ್ನೂ ಪಡೆದಿದ್ದರು. ಆದರೆ ಇದೀಗ ಟ್ರಾಫಿಕ್ ಆಗುತ್ತೆ ಅನ್ನೋ ಕಾರಣಕ್ಕೆ ಅನುಮತಿ ನಿರಾಕರಣೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ತವರಿನಲ್ಲೇ ಅವಕಾಶ ನಿರಾಕರಣೆಯಾಗಿದೆ.
ಹಾಗಾಗಿ ರಾಮನ ಹೆಸರಿನಲ್ಲಿ ರಾಜಕಾರಣ ಮಾಡ್ತಿರೋ ಆರೋಪ ವ್ಯಕ್ತವಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ನಾಳೆ ಸಂಜೆ ನಡೆಯಲಿದ್ದ ಲಕ್ಷ ದೀಪೋತ್ಸವಕ್ಕೆ ತಯಾರಿ ನಡೆದಿತ್ತು, ಅನುಮತಿ ನಿರಾಕರಿಸಿದ್ದಕ್ಕೆ ಸ್ಥಳೀಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 10 ದಿನಗಳ ಹಿಂದೆಯಷ್ಟೇ ಲಕ್ಷ ದೀಪೋತ್ಸವಕ್ಕೆ ಅನುಮತಿ ಕೊಟ್ಟಿದ್ದ ಪೊಲೀಸರು, ಶನಿವಾರ ಇದ್ದಕ್ಕಿದ್ದಂತೆ ಅನುಮತಿ ರದ್ದುಪಡಿಸಿದ್ದೇವೆ ಎಂದು ಪತ್ರ ನೀಡಿದ್ದಾರೆ. ಸಂಚಾರಕ್ಕೆ ಅಡ್ಡಿ, ಕಾನೂನು ಸುವ್ಯವಸ್ಥೆ ಧಕ್ಕೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅನುಮತಿ ರದ್ದು ಮಾಡಿದ್ದೇವೆ ಎಂದು ನಗರ ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ : ಅಯೋಧ್ಯೆಯ ಸ್ಯಾಟಲೈಟ್ ಪಿಕ್ಚರ್ ರಿಲೀಸ್ ಮಾಡಿದ ಇಸ್ರೋ..!