Download Our App

Follow us

Home » ರಾಷ್ಟ್ರೀಯ » ನಮ್ಮ ಟ್ರ್ಯಾಕ್​ ರೆಕಾರ್ಡ್​ ನೋಡಿ ಜನ ವೋಟ್​ ಹಾಕಿದ್ದಾರೆ : ಪ್ರಧಾನಿ ಮೋದಿ..!

ನಮ್ಮ ಟ್ರ್ಯಾಕ್​ ರೆಕಾರ್ಡ್​ ನೋಡಿ ಜನ ವೋಟ್​ ಹಾಕಿದ್ದಾರೆ : ಪ್ರಧಾನಿ ಮೋದಿ..!

ದೆಹಲಿ : ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್​​ಡಿಎ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿವೆ. ಈ ಸಮೀಕ್ಷೆಗಳ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಟ್ರ್ಯಾಕ್​ ರೆಕಾರ್ಡ್​ ನೋಡಿ ಜನ ವೋಟ್​ ಹಾಕಿದ್ದಾರೆ ಎಂದು ಎಕ್ಸ್‌ನಲ್ಲಿ​ ಪೋಸ್ಟ್‌ ಹಾಕಿದ್ದಾರೆ.

ಎಕ್ಸಿಟ್​ ಪೋಲ್​ ಬೆನ್ನಲ್ಲೇ ಮೋದಿ ಎಕ್ಸ್‌ನಲ್ಲಿ​ ಪೋಸ್ಟ್‌ ಮಾಡಿ, ದಾಖಲೆಯ ಮಟ್ಟದಲ್ಲಿ ಜನ ವೋಟ್​ ಹಾಕಿದ್ದಾರೆ. ನಮ್ಮ ಕಾರ್ಯಕ್ರಮಗಳು ಜನರಿಗೆ ತಲುಪಿದೆ, ಜಾತಿ, ಧರ್ಮ ಮರೆತು ಜನ ಮತ ಚಲಾಯಿಸಿದ್ದಾರೆ, ಕುಟುಂಬ ರಾಜಕಾರಣದ ಪಕ್ಷಗಳನ್ನ ಜನ ಧಿಕ್ಕರಿಸಿದ್ದಾರೆ ಎಂದು ಬರೆದಿದ್ದಾರೆ.

ನಾನು ಪ್ರತಿಯೊಬ್ಬ ಎನ್‌ಡಿಎ ಕಾರ್ಯಕರ್ತರನ್ನು ಶ್ಲಾಘಿಸಲು ಬಯಸುತ್ತೇನೆ. ಭಾರತ ಆಗಾಗ್ಗೆ ತೀವ್ರವಾದ ಶಾಖವನ್ನು ಎದುರಿಸುತ್ತಿದೆ. ನಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ಜನರಿಗೆ ಸೂಕ್ಷ್ಮವಾಗಿ ವಿವರಿಸಿ ಮತ ಚಲಾಯಿಸುವಂತೆ ಪ್ರೇರೇಪಿಸಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ನಮ್ಮ ಕಾರ್ಯಕರ್ತರು ನಮ್ಮ ದೊಡ್ಡ ಶಕ್ತಿ ಎಂದು ಕೊಂಡಾಡಿದ್ದಾರೆ. ಹಾಗೆಯೇ ಜನರಿಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಕೆ.ಆರ್ ನಗರ ಸಂತ್ರಸ್ತೆ ಕಿಡ್ನಾಪ್ ಪ್ರಕರಣ : ಭವಾನಿ ರೇವಣ್ಣ ಬಂಧನಕ್ಕೆ ವಿಶೇಷ ತಂಡ ರಚನೆ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here