ತಿರುಪತಿ : ತಿಮ್ಮಪ್ಪನ ಪವಿತ್ರ ಲಡ್ಡು ಪ್ರಸಾದಕ್ಕೆ ಕೊಬ್ಬಿನ ಅಂಶ ಸೇರಿತ್ತು ಅನ್ನೋ ಸುದ್ದಿ ದೇಶಾದ್ಯಂತ ಹಬ್ಬಿದ ನಂತ್ರ 11 ದಿನಗಳ ವ್ರತ ಮಾಡ್ತಿರುವ ಪವನ್ ಕಲ್ಯಾಣ್ ಅಕ್ಟೋಬರ್ 3ರಂದು ತಿರುಪತಿಗೆ ಭೇಟಿ ನೀಡಲಿದ್ದಾರೆ.
ಆಂಧ್ರ ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ವ್ರತ ಮಾಡುತ್ತಿದ್ದಾರೆ. ಶ್ರೀವಾರಿಯ ಪ್ರಸಾದ ಅಪವಿತ್ರ ಆಗಿದ್ದು ನಾಡಿಗೆ ಶ್ರೇಯಸ್ಸಲ್ಲ. ಹೀಗಾಗಿ ಅಧಿಕಾರದಲ್ಲಿರುವ ನಾನು ಪ್ರಾಯಶ್ಚಿತ್ತ ವ್ರತ ಮಾಡಿ ಆ ದೇವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಪವನ್ ವ್ರತಾಚರಣೆ ಆರಂಭಿಸಿದ್ದರು.
ಇದೀಗ ಅಕ್ಟೋಬರ್ 3ರಂದು ತಿರುಪತಿಗೆ ಪವನ್ ತೆರಳುತ್ತಿದ್ದು, ಸುಮಾರು 10 ಲಕ್ಷ ಮಂದಿ ಸೇರುವ ಸಾಧ್ಯತೆ ಇದೆ. ಹೀಗಾಗಿ ಈಗಾಗಲೇ ತಿರುಪತಿಯಲ್ಲಿ ಡಿಸಿಎಂ ಭೇಟಿಗೆ ಸಕಲ ಸಿದ್ಧತೆ ನಡೆದಿದೆ. ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪವನ್ ವ್ರತ ಅಂತ್ಯ ಮಾಡಲಿದ್ದಾರೆ.
ಇದನ್ನೂ ಓದಿ : ಮುಡಾ ಸೈಟ್ ವಾಪಸ್ – ನನ್ನ ಪತ್ನಿಯ ನಿರ್ಧಾರ ಆಶ್ಚರ್ಯ ತಂದಿದೆ ಎಂದ ಸಿಎಂ ಸಿದ್ದರಾಮಯ್ಯ..!
Post Views: 34