ಓಯೋ ಹೋಟೆಲ್ ಬುಕ್ಕಿಂಗ್ ಕಂಪನಿ ಚೆಕ್ ಇನ್‌ಗೆ ಸಂಬಂಧಿಸಿದಂತೆ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮವನ್ನು ಜಾರಿಗೊಳಿಸಿದೆ. ಅದರಂತೆ ಇನ್ಮುಂದೆ ಅವಿವಾಹಿತರಿಗೆ ರೂಮ್ ನೀಡಲ್ಲ ಎಂದು ಹೇಳಿದೆ.
ಖಾಸಗಿ ಸಮಯ ಕಳೆಯಲು ಮೊದಲ ಆಯ್ಕೆಯಾಗಿದ್ದ ಓಯೋ ಇದೀಗ ತನ್ನ ನೆಚ್ಚಿನ ಗ್ರಾಹಕರಿಗೆ ಶಾಕ್ ನೀಡಿದೆ. ತನ್ನ ಪಾಲುದಾರ ಹೋಟೆಲ್‌ಗಳಿಗಾಗಿ ಹೊಸ ಚೆಕ್ ಇನ್ ಮಾರ್ಗಸೂಚಿ ಹೊರಡಿಸಿ, ಮೊದಲಿಗೆ ಮೀರತ್ನಿಂದ ಜಾರಿಗೊಳಿಸಲು ಆರಂಭಿಸಿದೆ.
ಇತ್ತ ಹೊಸ ವರ್ಷದಲ್ಲಿ ಯುವ ಸಮೂಹ ಓಯೋ ರೂಮ್ಗಳನ್ನ ಹೆಚ್ಚು ಬುಕ್ ಮಾಡಿದ್ದು, ಓಯೋಗೆ ಕೋಟಿ ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಇದ್ರ ನಡುವೆ ಓಯೋ ತನ್ನ ಚೆಕ್ ಇನ್ ನಿಯಮ ಬದಲಿಸಿದ್ದು ಚರ್ಚೆಗೆ ಗ್ರಾಸವಾಗ್ತಿದೆ.
ಐಡಿ ಪ್ರೂಫ್ ಕಡ್ಡಾಯ
ಹೊಸ ನಿಯಮದ ಪ್ರಕಾರ, ಹೊಟೇಲ್‌ಗೆ ಬರುವ ಜೋಡಿಗಳು ಕಡ್ಡಾಯವಾಗಿ ತಮ್ಮ ಸಂಬಂಧದ ದಾಖಲೆ ತರುವುದು ಕಡ್ಡಾಯವಾಗಿದೆ. ಆನ್‌ಲೈನ್ ಬುಕ್ಕಿಂಗ್‌ಗೂ ಕೂಡಾ ಇದು ಕಡ್ಡಾಯವಾಗಿದೆ. ಬೇರೆ ನಗರಗಳಿಗೂ ಇದೆ ನಿಯಮ ವಿಸ್ತರಿಸುವ ಬಗ್ಗೆ ಯೋಚನೆ ಮಾಡಲಾಗುವುದು. ಒಟ್ಟಾರೆ ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಪದ್ಧತಿಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಓಯೋ ಉತ್ತರ ಭಾರತ ಪ್ರಾದೇಶಿಕ ಮುಖ್ಯಸ್ಥ ತಿಳಿಸಿದ್ದಾರೆ.
ಇದನ್ನೂ ಓದಿ : ಕನ್ನಡದ ಹಿರಿಯ ಸಾಹಿತಿ ಡಾ. ನಾ ಡಿಸೋಜ ವಿಧಿವಶ..!