Download Our App

Follow us

Home » ರಾಜಕೀಯ » ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಬಂದ್​​ಗೆ ಕೆಎಸ್‌ಪಿಸಿಬಿ ಆದೇಶ..!

ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಬಂದ್​​ಗೆ ಕೆಎಸ್‌ಪಿಸಿಬಿ ಆದೇಶ..!

ಕಲಬುರಗಿ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಬಂದ್​ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ನೀಡಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಇರುವ ಶುಗರ್ ಫ್ಯಾಕ್ಟರಿ ಮತ್ತು ಏಥೆನಾಲ್ ಘಟಕಕ್ಕೆ ಬೀಗ ಹಾಕಲು ಆದೇಶಿಸಲಾಗಿದೆ. ಕಾರ್ಖಾನೆಯ ಕಲುಷಿತ ನೀರು ಮುಲ್ಲಾಮಾರಿ ಜಲಾಶಯಕ್ಕೆ ಬೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.

ಅಲ್ಲದೇ ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪ ಹಿ‌ನ್ನೆಲೆ ಬೀಗ ಜಡಿಯುವಂತೆ ಮಂಡಳಿ ಆದೇಶ ಹೊರಡಿಸಿದೆ. ಇದರ ಜೊತೆಯಲ್ಲಿ ಫ್ಯಾಕ್ಟರಿಗೆ ನೀಡರೋ ವಿದ್ಯುತ್ ನೀರಿನ ಸಂರ್ಪಕ ಕಡಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.

ಶುಗರ್ ಫ್ಯಾಕ್ಟರಿಗಳನ್ನು ಬಂದ್ ಮಾಡುವುದು ಮಾತ್ರವಲ್ಲದೆ, ಅವುಗಳ ನೋಂದಣಿಗೆ ಸಹಾಯ ಮಾಡಿದ ಅಧಿಕಾರಿಗಳ ವಿರುದ್ದವೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೆಎಸ್‌ಪಿಸಿಬಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಎರಡು ಕಾರ್ಖಾನೆಗಳಲ್ಲಿ ಅವೈಜ್ಞಾನಿಕ ನಿರ್ವಹಣೆ ಸೇರಿದಂತೆ ಹಲವು ಲೋಪಗಳು ಕಂಡು ಬಂದಿವೆ.

ಕಳೆದ ವಾರ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಕೆಎಸ್‌ಪಿಸಿಬಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಮಂಡಳಿ, ಸಕ್ಕರೆ ಕಾರ್ಖಾನೆಗಳನ್ನು ಮುಚ್ಚುವಂತೆ ನೋಟಿಸ್ ಜಾರಿಗೊಳಿಸಿದೆ. ವಿಷಾನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾದ ಹುಮ್ನಾಬಾದ್‌ನ ಪ್ರಸನ್ನ ಪ್ರಿ ಪ್ರೊಸೆಸಿಂಗ್‌ ಪ್ರೈಧಿವೇಟ್‌ ಲಿಮಿಟೆಡ್‌ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಒಡೆತನದ ಚಿಂಚೋಳಿಯ ಸಿದ್ಧಶ್ರೀ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ತಕ್ಷಣದಿಂದಲೇ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ.

ಇದನ್ನೂ ಓದಿ : ಮೋದಿಯವರು ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ : ಮೋದಿಯವರನ್ನು ಹಾಡಿಹೊಗಳಿದ ಜನಾರ್ದನ ರೆಡ್ಡಿ..!

Leave a Comment

DG Ad

RELATED LATEST NEWS

Top Headlines

ಪ್ಲೀಸ್‌ ಒಂದು ಚಾನ್ಸ್​ ಕೊಡಿ ಬಿಗ್​ಬಾಸ್… ಜಗದೀಶ್, ರಂಜಿತ್ ಹೊರಹೋಗ್ತಿದ್ದಂತೆ ಕಣ್ಣೀರಿಟ್ಟ ಸ್ಪರ್ಧಿಗಳು..!

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಾಕಿಂಗ್ ಬೆಳವಣಿಗೆ ನಡೆಯುತ್ತಿದೆ. ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ

Live Cricket

Add Your Heading Text Here