ಬೆಳಗಾವಿ : ಲೋಕಸಭಾ ಚುನಾವಣೆ 2024ರ ಮತದಾನಕ್ಕೆ ಸಜ್ಜಾಗುತ್ತಿರುವ ಬೆಳಗಾವಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಟ್ಟಿದ್ದಾರೆ. ಬೆಳಗಾವಿಗೆ ಮೋದಿ ರಾತ್ರಿಯೇ ಬಂದಿದ್ದು, ಬೆಳಗಾವಿ ಏರ್ಪೋರ್ಟ್ಗೆ ಬರ್ತಿದ್ದಂತೆ ಮೋದಿಯನ್ನು ಜಗದೀಶ್ ಶೆಟ್ಟರ್ ಸ್ವಾಗತಿಸಿದ್ದಾರೆ. ಕಾಕತಿ ಬಳಿಯ ಐಟಿಸಿ ವೆಲ್ಕಮ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಇಂದು ಬೆಳಗಾವಿ ಸೇರಿದಂತೆ ಮೂರು ಕಡೆ ಮೋದಿ ಪ್ರಚಾರ ಮಾಡಲಿದ್ದು, ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಎಲೆಕ್ಷನ್ ಘೋಷಣೆ ನಂತರ ಐದನೇ ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಸುನಾಮಿ ಶುರುವಾಗಲಿದ್ದು, ಕೇಸರಿ ಕಲಿಗಳ ಪರ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ. ಎರಡು ದಿನ ರಾಜ್ಯದಲ್ಲಿ ಮೋದಿ ಮಿಂಚಿನ ಸಂಚಾರ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಬೆಳಗ್ಗೆ 11 ಗಂಟೆಗೆ ಬೃಹತ್ ಸಮಾವೇಶ ನಡೆಯಲಿದ್ದು, ಬೆಳಗಾವಿ ಬಳಿಕ ಉತ್ತರ ಕನ್ನಡ ಜಿಲ್ಲೆಗೆ ಮೋದಿ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಉತ್ತರ ಕನ್ನಡದಲ್ಲಿ ಮೋದಿ ಸಮಾವೇಶ ನಡೆಸಿ, ನಂತರ ಉತ್ತರ ಕನ್ನಡದಿಂದ ದಾವಣಗೆರೆ ಜಿಲ್ಲೆಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ದಾವಣಗೆರೆಯಲ್ಲಿ ಮೆಗಾ ಪ್ರಚಾರ ಸಭೆಯ ಬಳಿಕ ಬಳ್ಳಾರಿ ಜಿಲ್ಲೆಗೆ ಪ್ರಧಾನಿ ಮೋದಿ ಪ್ರಯಾಣಿಸಲಿದ್ದಾರೆ.
ಬಳ್ಳಾರಿಯಲ್ಲಿ ಪುನೀತ್ ರಾಜ್‍ಕುಮಾರ್ ಆಟದ ಮೈದಾನದಲ್ಲಿ ಮೋದಿ ಸಮಾವೇಶ ನಡೆಸಲಿದ್ದು, ಸಂಜೆ 5ರಿಂದ 5.50ರ ವರೆಗೂ ನಡೆಯಲಿರುವ ಮೋದಿ ಸಮಾವೇಶ ನಡೆಸಲಿದ್ದಾರೆ. ನಾಳೆ ರಾತ್ರಿ ಬಳ್ಳಾರಿಯ ಹೊಸಪೇಟೆಯಲ್ಲೇ ಮೋದಿ ವಾಸ್ತವ್ಯ ಹೂಡಲಿದ್ದು, ಏಪ್ರಿಲ್ 29ರಂದು ಬಳ್ಳಾರಿಯಿಂದ ಬಾಗಲಕೋಟೆಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಬಾಗಲಕೋಟೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಮೋದಿ ಸಮಾವೇಶ ನಡೆಸಿ, ಮಹಾರಾಷ್ಟ್ರಕ್ಕೆ ತೆರಳಲಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ ನೇಹಾ ಹಿರೇಮಠ ಹ*ತ್ಯೆ ಪ್ರಕರಣ : ಆರೋಪಿ ಫಯಾಜ್ನನ್ನ ನ್ಯಾಯಾಲಯಕ್ಕೆ ಕರೆತಂದ ಸಿಐಡಿ ಅಧಿಕಾರಿಗಳು..!