ಬೆಂಗಳೂರು : ಕೆಫೆ ಬ್ಲಾಸ್ಟ್ ಹೊತ್ತಲ್ಲೇ NIAಯಿಂದ ಬಿಗ್ ರೇಡ್ ನಡೆದಿದೆ. ಬೆಂಗಳೂರಿನ R.T ನಗರದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣ ಸಂಬಂಧ ಬೆಂಗಳೂರು ಸೇರಿ ಏಳು ರಾಜ್ಯಗಳಲ್ಲಿ NIA ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಜೈಲಿನಲ್ಲಿ ಸಹ ಕೈದಿಗಳನ್ನು ಸೆಳೆದು ಉಗ್ರ ಕೃತ್ಯಕ್ಕೆ ಪ್ರಚೋದಿಸಿದ್ದ ಆರೋಪ ಕೇಳಿಬಂದಿತ್ತು. ಸುಲ್ತಾನ್ಪಾಳ್ಯದಲ್ಲಿ ಲೈವ್ ಗ್ರನೇಡ್ , ಪಿಸ್ತೂಲ್ ಮತ್ತಿತರೆ ವಸ್ತು ಪತ್ತೆಯಾಗಿದ್ದವು, ಹಾಗಾಗಿ ಮುಂದಿನ ತನಿಖೆಗಾಗಿ ಕೇಂದ್ರ ಗೃಹ ಇಲಾಖೆ NIAಗೆ ಕೇಸ್ ವಹಿಸಿತ್ತು. 2023ರ ಜುಲೈನಲ್ಲಿ ಆರ್ ಟಿ ನಗರ, ಹೆಬ್ಬಾಳ, ಸುಲ್ತಾನ್ ಪಾಳ್ಯದಲ್ಲಿ ರೇಡ್ ನಡೆದಿತ್ತು.
ಸರಣಿ ವಿಧ್ವಂಸಕ ಕೃತ್ಯ ನಡೆಸಿ, ಅನಾಹುತ ಎಸಗಲು ಐವರು ಸಂಚು ರೂಪಿಸಿದ್ದರು. ಹಾಗಾಗಿ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಸ್, ಸೈಯದ್ ಮುದಾಸೀರ್ ಪಾಷಾ, ಮಹಮದ್ ಫೈಸಲ್, ಮಹಮದ್ ಉಮರ್ ಎಂಬ ಶಂಕಿತರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಸಂಬಂಧ ದೇಶದ್ರೋಹ ಚಟುವಟಿಕೆ, ಒಳಸಂಚು, ಶಸ್ತ್ರಾಸ್ರ ಕಾಯ್ದೆಯಡಿ ಹೆಬ್ಬಾಳದಲ್ಲಿ ಕೇಸ್ ದಾಖಲಾಗಿದೆ.
2008ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಟಿ.ನಜೀರ್ ಅದೇ ಜೈಲಿನಲ್ಲಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಷ್ಕರ್-ಎ-ತೊಯ್ಬಾದ ನಜೀರ್ ಜೊತೆ ಜುನೈದ್‌ಗೆ ಸಂಪರ್ಕ ಬೆಳೆದಿದೆ.
ಇದನ್ನೂ ಓದಿ : ‘ರೋಜಿ’ ಸಿನಿಮಾದಲ್ಲಿ ಒರಟ ಪ್ರಶಾಂತ್..!