Download Our App

Follow us

Home » ಅಪರಾಧ » ಕಾಟನ್ ಪೇಟೆಯಲ್ಲಿ ಶರತ್ ಕೊಲೆ ಕೇಸ್​ – ನಾಲ್ವರು ಆರೋಪಿಗಳು ಅರೆಸ್ಟ್..!

ಕಾಟನ್ ಪೇಟೆಯಲ್ಲಿ ಶರತ್ ಕೊಲೆ ಕೇಸ್​ – ನಾಲ್ವರು ಆರೋಪಿಗಳು ಅರೆಸ್ಟ್..!

ಬೆಂಗಳೂರು : ಎರಡು ದಿನಗಳ ಹಿಂದೆ ಕಾಟನ್ ​ಪೇಟೆಯ ಅಂಜನಪ್ಪ ಗಾರ್ಡನ್​ನಲ್ಲಿ ಸಾವಿನ ಮನೆಗೆ ಬಂದು ಸ್ನೇಹಿತನಿಂದಲೇ ಕೊಲೆಯಾದ ಘಟನೆ ನಡೆದಿತ್ತು. ಸ್ನೇಹಿತ ಶರತ್​ಗೆ ಚಾಕು ಇರಿದು ಆಟೋ ಚಾಲಕ ಶರತ್ ಎಂಬಾತ ಹತ್ಯೆಗೈದಿದ್ದ. ಇದೀಗ ಈ ಕೊಲೆ ಕೇಸ್​​ನ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಶರತ್, ನಿರಂಜನ್, ದೀಪಕ್, ಮನೋಜ್ ಬಂಧಿತ ಆರೋಪಿಗಳಾಗಿದ್ದಾರೆ. ಮಹಿಳೆಯೋರ್ವಳನ್ನು ಮೃತ ಶರತ್ ಬೈದಿದ್ದ. ಈ ವೇಳೆ ಆರೋಪಿ ಶರತ್ ಯಾಕೆ ಬೈಯುತ್ತಿಯಾ ಎಂದು ಕೇಳಿದ್ದ. ನಂತರ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿತ್ತು. ಅದು ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಆರೋಪಿ ಶರತ್​ ಪರಾರಿ ಆಗಿದ್ದಾನೆ.

ಗಾಯಾಳು ಶರತ್​ನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. ಈ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ‌ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಸದ್ಯ ಕೊಲೆ ಕೇಸ್ ಸಂಬಂಧ ನಾಲ್ವರು ಆರೋಪಿಗಳು ಅರೆಸ್ಟ್​ ಆಗಿದ್ದಾರೆ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಬೆನ್ನಲ್ಲೇ M.B ಪಾಟೀಲ್​​ಗೆ ಪ್ರಾಸಿಕ್ಯೂಷನ್ ಭೀತಿ – ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು..!

Leave a Comment

DG Ad

RELATED LATEST NEWS

Top Headlines

ಸಿ.ಟಿ ರವಿ ಅದ್ಧೂರಿ ಸ್ವಾಗತ ವೇಳೆ ಆ್ಯಂಬುಲೆನ್ಸ್​ಗಳ ದುರ್ಬಳಕೆ – ಚಾಲಕರು & ಮಾಲೀಕರ ಮೇಲೆ FIR ದಾಖಲು..!

ಚಿಕ್ಕಮಗಳೂರು : ಸಿ.ಟಿ ರವಿ ಅದ್ಧೂರಿ ಸ್ವಾಗತ ವೇಳೆ ಆ್ಯಂಬುಲೆನ್ಸ್​ಗಳ ದುರ್ಬಳಕೆ ಮಾಡಿದ ಸಂಬಂಧ ಆ್ಯಂಬುಲೆನ್ಸ್​​ ಚಾಲಕರು ಮತ್ತು ಮಾಲೀಕರ ಮೇಲೆ FIR ದಾಖಲಾಗಿದೆ. 7 ಆ್ಯಂಬುಲೆನ್ಸ್​​

Live Cricket

Add Your Heading Text Here