ಸತತ 3ನೇ ಬಾರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈಶ್ವರನ ಹೆಸರಿನಲ್ಲಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಪತಿ ದೌಪ್ರದಿ ಮುರ್ಮು ಅವರು ನರೇಂದ್ರ ಮೋದಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದು, ಪ್ರಧಾನಿ ಅವರ ಜೊತೆ ನೂತನ ಕೇಂದ್ರ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ರು.
ಮಂಡ್ಯ ಸಂಸದ ಹೆಚ್.ಡಿ ಕುಮಾರಸ್ವಾಮಿ ಅವರು ನೂತನ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರಕ್ಕೆ ಸೇರ್ಪಡೆಯಾದರು. ನರೇಂದ್ರ ಮೋದಿ ಅವರ 2.0 ಸರ್ಕಾರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾಗಿದ್ದ ನಿತಿನ್ ಗಡ್ಕರಿ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಸಂಸದರು :
- ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ರಾಜನಾಥ್ ಸಿಂಗ್ ಪ್ರಮಾಣ ವಚನ
- ಮೂರನೇ ಬಾರಿಗೆ ಕೇಂದ್ರ ಸಚಿವರಾಗಿ ಅಮಿತ್ ಶಾ ಪ್ರಮಾಣ ವಚನ
- ಮೂರನೇ ಬಾರಿಗೆ ಸಚಿವರಾಗಿ ನಿತಿನ್ ಗಡ್ಕರಿ ಪ್ರಮಾಣ ವಚನ ಸ್ವೀಕಾರ
- ಜಯಪ್ರಕಾಶ್ ನಡ್ಡಾ ಅವರು, ಪುನಃ ಮೋದಿ ಸಂಪುಟ ಸೇರಿದ್ದಾರೆ
- ಕೇಂದ್ರ ಸಚಿವರಾಗಿ ಪ್ರಹ್ಲಾದ್ ಜೋಶಿಯವರಿಂದ ಪ್ರಮಾಣ ವಚನ ಸ್ವೀಕಾರ.
- ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಅವರು ಇದೇ ಮೊದಲ ಬಾರಿಗೆ ಮೋದಿ ಸಂಪುಟ ಸೇರ್ಪಡೆಗೊಂಡರು
- ಮೋದಿ 2.0 ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್. ಜೈಶಂಕರ್ ಅವರು ಪ್ರಮಾಣ ವಚನ ಸ್ವೀಕರಿಸಿದರು
- ಹರ್ಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ ಪ್ರಮಾಣ ವಚನ
- ಪಿಯೂಶ್ ಗೋಯೆಲ್ ಅವರಿಂದ ಪ್ರಮಾಣ ವಚನ ಸ್ವೀಕಾರ
- ಧರ್ಮೇಂದ್ರ ಪ್ರದಾನ್ ಅವರಿಂದ ಪ್ರಮಾಣ ವಚನ ಸ್ವೀಕಾರ
- ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿಯವರಿಂದ ಪ್ರಮಾಣ ವಚನ
- ರಾಜೀವ್ ರಂಜನ್ ಸಿಂಗ್ ಅವರಿಂದ ಪ್ರಮಾಣ ವಚನ ಸ್ವೀಕಾರ
- ಅಸ್ಸಾಂ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್ ಅವರಿಂದ ಪ್ರಮಾಣ ವಚನ
- ಡಾ. ವೀರೇಂದ್ರ ಕುಮಾರ್ ಅವರಿಂದ ಪ್ರಮಾಣ ವಚನ ಸ್ವೀಕಾರ
- ಭೂಪೇಂದ್ರ ಯಾದವ್ ಅವರಿಂದ ಪ್ರಮಾಣ ವಚನ ಸ್ವೀಕಾರ
- ಗಜೇಂದ್ರ ಸಿಂಗ್ ಶೆಖಾವತ್ ಅವರಿಂದ ಪ್ರಮಾಣ ವಚನ
- ಜ್ಯೋತಿರಾದಿತ್ಯ ಮಾಧವ ರಾವ್ ಸಿಂಧ್ಯ ಪ್ರಮಾಣ ವಚನ
- ಅಶ್ವಿನಿ ವೈಷ್ಣವ್ ಪ್ರಮಾಣ ವಚನ
- ರಾಜ್ಯ ಸಚಿವರಾಗಿ ವಿ. ಸೋಮಣ್ಣ ಪ್ರಮಾಣ ವಚನ ಸ್ವೀಕಾರ
ಇದನ್ನೂ ಓದಿ : ಮೋದಿ ಪ್ರಮಾಣ ವಚನಕ್ಕೆ ದೇವೇಗೌಡರು ಹೋಗ್ತಿಲ್ಲ – ಪತ್ರದ ಮುಖೇನ ಪ್ರಧಾನಿಗೆ ಶುಭಕೋರಿದ ಮಾಜಿ ಪ್ರಧಾನಿ..!