Download Our App

Follow us

Home » ರಾಜಕೀಯ » ಇಂದು ಸಂಸದೆ ಸುಮಲತಾರಿಂದ ಮಹತ್ವದ ಸಭೆ : ಬಿಜೆಪಿ-ಜೆಡಿಎಸ್​ ಮೈತ್ರಿಗೆ ಕಂಟಕವಾಗ್ತಾರಾ?

ಇಂದು ಸಂಸದೆ ಸುಮಲತಾರಿಂದ ಮಹತ್ವದ ಸಭೆ : ಬಿಜೆಪಿ-ಜೆಡಿಎಸ್​ ಮೈತ್ರಿಗೆ ಕಂಟಕವಾಗ್ತಾರಾ?

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿರುವ ಕಾಂಗ್ರೆಸ್​ಗೆ ಲೋಕಸಭಾ ಚುನಾವಣೆಯಲ್ಲಿ ಠಕ್ಕರ್‌ ಕೊಡಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಬಿಜೆಪಿ ಮೂರು ಕ್ಷೇತ್ರಗಳಾದ ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿತ್ತು. ಇದೀಗ, ಬಿಜೆಪಿಗೆ 25 ಕ್ಷೇತ್ರ ಹಾಗೂ ಜೆಡಿಎಸ್ ಗೆ 3 ಕ್ಷೇತ್ರವೆಂದು ಖಚಿತವಾದ ಬಳಿಕ ಮಂಡ್ಯದಿಂದ ಹೆಚ್.​ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಇದೀಗ ಮಂಡ್ಯ ಕ್ಷೇತ್ರ ಕೊನೆಗೂ ಜೆಡಿಎಸ್​​​ ಪಾಲಾಗಿದ್ದು, ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಟಿಕೆಟ್ ಮಿಸ್ ಆಗಿದ್ದಕ್ಕೆ  ಸಂಸದೆ ಸುಮಲತಾ ಮುನಿಸಿಕೊಂಡಿದ್ದಾರೆ. ಇದ್ದರಿಂದ ಸುಮಲತಾ ಅಂಬರೀಶ್ ಮೈತ್ರಿಯಗೆ ಕಂಟಕವಾಗ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಅಲ್ಲದೇ ಇಂದು ಮಧ್ಯಾಹ್ನ 2.30 ಕ್ಕೆ ಬೆಂಗಳೂರಿನ ಜೆಪಿನಗರದ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದಿದ್ದು ಭಾರಿ ಕುತೂಹಲ ಮೂಡಿಸಿದೆ.

ಇದಲ್ಲದೇ  ಸುಮಲತಾ ಅಂಬರೀಶ್ ಮೊನ್ನೆಯ ಜೆಡಿಎಸ್ ಬಿಜೆಪಿ ಸಮನ್ವಯ ಸಭೆಗೆ ಗೈರಾಗಿದ್ದರು. ಇನ್ನು ಮಂಡ್ಯ ಕ್ಷೇತ್ರ ಜೆಡಿಎಸ್​ಗೆ  ಮೀಸಲಾಗ್ತಿದ್ದಂತೆ ಸುಮಲತಾ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿಕೊಟ್ಟು ಮನವೊಲಿಕೆ ಮಾಡಿದ್ದಾರೆ.

ಇನ್ನು ಈ ವಿಚಾರವಾಗಿ  ಬೆಂಬಲಿಗರ ಸಭೆ ನಡೆಸಿ ನಿರ್ಧಾರ ತಿಳಿಸೋದಾಗಿ ಸುಮಲತಾ ಹೇಳಿಕೊಂಡಿದ್ದಾರೆ. ಬೆಂಬಲಿಗರ ಸಭೆ ಕರೆದು ಮುಂದಿನ ನಡೆ ತಿಳಿಸಲಿರುವ ಸುಮಲತಾ ಇಂದೇ ತಮ್ಮ ನಿರ್ಧಾರ ತಿಳಿಸುತ್ತಾರಾ? ಮಂಡ್ಯಗೆ ಹೋಗಿ ನಿರ್ಧಾರ ಹೇಳ್ತಾರಾ? ಎಂಬುದು ಕಾದುನೋಡಬೇಕಾಗಿದೆ.

ಇದನ್ನೂ ಓದಿ:  ಖ್ಯಾತ ಬಹುಭಾಷಾ ನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ..!

Leave a Comment

DG Ad

RELATED LATEST NEWS

Top Headlines

ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್ – ಶೀಘ್ರವೇ KMFನಿಂದ ‘ನಂದಿನಿ ದೋಸೆ ಹಿಟ್ಟು’ ಬಿಡುಗಡೆ..!

ಬೆಂಗಳೂರು : ದೋಸೆ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಶೀಘ್ರವೇ ಕೆಎಂಎಫ್​ನಿಂದ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ನಂದಿನಿ ಬ್ರ್ಯಾಂಡ್ ಅಡಿ

Live Cricket

Add Your Heading Text Here