Download Our App

Follow us

Home » ಸಿನಿಮಾ » ಖ್ಯಾತ ಬಹುಭಾಷಾ ನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ..!

ಖ್ಯಾತ ಬಹುಭಾಷಾ ನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ..!

ಖ್ಯಾತ ಖಳ ನಟ ಡ್ಯಾನಿಯಲ್ ಬಾಲಾಜಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಡ್ಯಾನಿಯಲ್ ಅವರು ಸಣ್ಣ ವಯಸ್ಸಿಗೆ ನಿಧನ ಹೊಂದಿದ್ದು ಅನೇಕರಿಗೆ ಬೇಸರ ತರಿಸಿದೆ. ಅವರ ಅಗಲುವಿಕೆಯಿಂದ ಎಲ್ಲರೂ ಶಾಕ್​ಗೆ ಒಳಗಾಗುವಂತೆ ಆಗಿದೆ.

ಡ್ಯಾನಿಯಲ್​ ಬಾಲಾಜಿಗೆ 48 ವರ್ಷ ವಯಸ್ಸಾಗಿತ್ತು. ಕನ್ನಡ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಕುಟುಂಬ ಸದಸ್ಯರು ಹೌದು. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಇವರು ನಟಿಸಿದ್ದಾರೆ. ಕಿರಾತಕ, ಶಿವಾಜಿನಗರ, ಬೆಂಗಳೂರು ಅಂಡರ್​ವರ್ಲ್ಡ್​​​, ಡವ್​ ಸಿನಿಮಾಗಳಲ್ಲಿ ನಟಿಸಿದ್ದು, ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಿದ್ದರು.

ಇತ್ತೀಚೆಗೆ ಡ್ಯಾನಿಯಲ್ ಅವರು ಎದೆನೋವಿನಿಂದ ಚೆನ್ನೈ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ. ಚೆನ್ನೈನ ಪುರಸೈವಾಲ್ಕಂನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಡ್ಯಾನಿಯಲ್​​ ಬಾಲಾಜಿ ನಿಧನಕ್ಕೆ ಸ್ಯಾಂಡಲ್​​ವುಡ್, ಟಾಲಿವುಡ್​, ಕಾಲಿವುಡ್​ ಕಂಬನಿ ಮಿಡಿದಿದೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟ..! –

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗದಲ್ಲಿ ಖಾಸಗಿ ಬಸ್ಸನ್ನೇ ಕದ್ದು ಎಸ್ಕೇಪ್ ಆಗಿರೋ ಖತರ್ನಾಕ್ ಕಳ್ಳರು..!

ಚಿತ್ರದುರ್ಗ : ಖಾಸಗಿ ಬಸ್​​ವೊಂದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನಾಯಕನಹಟ್ಟಿ ಮೂಲದ SRE ಬಸ್ ಮಾಲೀಕ ಸಯ್ಯದ್

Live Cricket

Add Your Heading Text Here