Download Our App

Follow us

Home » ಮೆಟ್ರೋ » ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಅಬ್ಬರಿಸಿ, ಬೊಬ್ಬಿರಿದ ಮಳೆರಾಯ.. ನಗರದ ಅನೇಕ ರಸ್ತೆಗಳು ಸಂಪೂರ್ಣ ಜಲಾವೃತ..!

ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಅಬ್ಬರಿಸಿ, ಬೊಬ್ಬಿರಿದ ಮಳೆರಾಯ.. ನಗರದ ಅನೇಕ ರಸ್ತೆಗಳು ಸಂಪೂರ್ಣ ಜಲಾವೃತ..!

ಬೆಂಗಳೂರು : ಕೆಲವು ದಿನಗಳಿಂದ ಆಗಾಗ ಎಂಟ್ರಿ ಕೊಟ್ಟು ಮರೆಯಾಗ್ತಿದ್ದ ಮಳೆರಾಯ ನಿನ್ನೆ ಮಧ್ಯರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ ಅಬ್ಬರಿಸಿ ಬೊಬ್ಬೆರಿದ್ದಿದ್ದಾನೆ. ನಗರದ ಕೆ.ಆರ್​.ಮಾರ್ಕೆಟ್, ಜೆ.ಸಿ ರೋಡ್, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಏರಿಯಾಗಳಲ್ಲಿ ಧಾರಾಕಾರ ಮಳೆಯಾಗಿದೆ.

ಮಧ್ಯ ರಾತ್ರಿ ಸುಮಾರು 2 ಗಂಟೆಗೆ ಶುರುವಾದ ಮಳೆ, ಎರಡ್ಮೂರು ಗಂಟೆಗಳ ಕಾಲ ಬಿಟ್ಟು ಬಿಡದೇ ಗುಡುಗು ಸಹಿತ ಸುರಿದಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳೆಲ್ಲ ಜಲಾವೃತವಾಗಿದೆ. ನೀರಿನಲ್ಲಿ ವಾಹನ ಸವಾರರು ಸಂಚರಿಸಲಾಗದೇ ಪರದಾಡುತ್ತಿದ್ದಾರೆ.

ಇಂದು ಬೆಳಗ್ಗೆ 4ಗಂಟೆಯಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ವಿವಿಧ ಆಫೀಸ್​ಗಳಿಗೆ ಹೋಗುವ ಉದ್ಯೋಗಿಗಳು ಮಳೆಯಿಂದಾಗಿ ಕಿರಿಕಿರಿ ಅನುಭವಿಸ್ತಿದ್ದಾರೆ. ಇನ್ನು ಬೆಂಗಳೂರಿನ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಭಾರೀ ಅವಾಂತರ ಸೃಷ್ಟಿಯಾಗಿದೆ. ಅಲ್ಲದೇ ಕೆಲವು ಅಪಾರ್ಟ್​ಮೆಂಟ್​ಗಳಲ್ಲೂ ನೀರು ನುಗ್ಗಿ ಜನರಿಗೆ ಭಾರೀ ತೊಂದರೆ ಆಗ್ತಿದೆ.

ಮಲ್ಲೇಶ್ವರಂ, ರಾಜಾಜಿನಗರ, ಶಿವಾಜಿ ನಗರ, ಶಾಂತಿ ನಗರ, ಕೆಂಗೇರಿ, ವಿಜಯನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಗುಡುಗು, ಮಿಂಚು ಸಹಿತ ನಗರದಲ್ಲಿ ಮಳೆರಾಯ ಅಬ್ಬರ ಮುಂದುವರೆಸಿದ್ದಾನೆ. ಸಿಲ್ಕ್​ಬೋರ್ಡ್​ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಭಾರೀ ಮಳೆ ಹಿನ್ನೆಲೆ ಬೆಳ್ಳಂ ಬೆಳಗ್ಗೆ ನಗರದ ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದೆ.

ಇದನ್ನೂ ಓದಿ : ನೆಲಮಂಗಲದಲ್ಲಿ ಲಾರಿ-ಟೆಂಪೋ ನಡುವೆ ಭೀಕರ ಅಪಘಾತ – ಮೂವರು ಸಾವು, ನಾಲ್ವರ ಸ್ಥಿತಿ ಗಂಭೀರ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here