ಬೆಂಗಳೂರು : ಕೆಲವು ದಿನಗಳಿಂದ ಆಗಾಗ ಎಂಟ್ರಿ ಕೊಟ್ಟು ಮರೆಯಾಗ್ತಿದ್ದ ಮಳೆರಾಯ ನಿನ್ನೆ ಮಧ್ಯರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ ಅಬ್ಬರಿಸಿ ಬೊಬ್ಬೆರಿದ್ದಿದ್ದಾನೆ. ನಗರದ ಕೆ.ಆರ್.ಮಾರ್ಕೆಟ್, ಜೆ.ಸಿ ರೋಡ್, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಏರಿಯಾಗಳಲ್ಲಿ ಧಾರಾಕಾರ ಮಳೆಯಾಗಿದೆ.
ಮಧ್ಯ ರಾತ್ರಿ ಸುಮಾರು 2 ಗಂಟೆಗೆ ಶುರುವಾದ ಮಳೆ, ಎರಡ್ಮೂರು ಗಂಟೆಗಳ ಕಾಲ ಬಿಟ್ಟು ಬಿಡದೇ ಗುಡುಗು ಸಹಿತ ಸುರಿದಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳೆಲ್ಲ ಜಲಾವೃತವಾಗಿದೆ. ನೀರಿನಲ್ಲಿ ವಾಹನ ಸವಾರರು ಸಂಚರಿಸಲಾಗದೇ ಪರದಾಡುತ್ತಿದ್ದಾರೆ.
ಇಂದು ಬೆಳಗ್ಗೆ 4ಗಂಟೆಯಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ವಿವಿಧ ಆಫೀಸ್ಗಳಿಗೆ ಹೋಗುವ ಉದ್ಯೋಗಿಗಳು ಮಳೆಯಿಂದಾಗಿ ಕಿರಿಕಿರಿ ಅನುಭವಿಸ್ತಿದ್ದಾರೆ. ಇನ್ನು ಬೆಂಗಳೂರಿನ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಭಾರೀ ಅವಾಂತರ ಸೃಷ್ಟಿಯಾಗಿದೆ. ಅಲ್ಲದೇ ಕೆಲವು ಅಪಾರ್ಟ್ಮೆಂಟ್ಗಳಲ್ಲೂ ನೀರು ನುಗ್ಗಿ ಜನರಿಗೆ ಭಾರೀ ತೊಂದರೆ ಆಗ್ತಿದೆ.
ಮಲ್ಲೇಶ್ವರಂ, ರಾಜಾಜಿನಗರ, ಶಿವಾಜಿ ನಗರ, ಶಾಂತಿ ನಗರ, ಕೆಂಗೇರಿ, ವಿಜಯನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಗುಡುಗು, ಮಿಂಚು ಸಹಿತ ನಗರದಲ್ಲಿ ಮಳೆರಾಯ ಅಬ್ಬರ ಮುಂದುವರೆಸಿದ್ದಾನೆ. ಸಿಲ್ಕ್ಬೋರ್ಡ್ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಭಾರೀ ಮಳೆ ಹಿನ್ನೆಲೆ ಬೆಳ್ಳಂ ಬೆಳಗ್ಗೆ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಇದನ್ನೂ ಓದಿ : ನೆಲಮಂಗಲದಲ್ಲಿ ಲಾರಿ-ಟೆಂಪೋ ನಡುವೆ ಭೀಕರ ಅಪಘಾತ – ಮೂವರು ಸಾವು, ನಾಲ್ವರ ಸ್ಥಿತಿ ಗಂಭೀರ..!