Download Our App

Follow us

Home » ರಾಜಕೀಯ » ಜೂ.8ರಂದು ಮೋದಿ 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ?

ಜೂ.8ರಂದು ಮೋದಿ 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ?

ದೆಹಲಿ : ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಜೂನ್​​ 8ರಿಂದ ಮೋದಿ ಹ್ಯಾಟ್ರಿಕ್​ ಆಡಳಿತ ನಡೆಸುವ ಸಾಧ್ಯತೆಯಿದೆ. ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ NDA ಸರ್ಕಾರ ರಚನೆ ಮಾಡುವಷ್ಟು ಬಹುಮತ ಪಡೆದುಕೊಂಡಿದೆ. ಹಾಗಾಗಿ ಜೂನ್ 8 ರಂದು ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆಯಿದೆ.

ಜೂನ್​ 8 ರಂದು ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನರೇಂದ್ರ ಮೋದಿಯವರು ಪ್ರಮಾಣವಚನ ತೆಗೆದುಕೊಂಡು ಪ್ರಧಾನಿ ಹುದ್ದೆಗೆ ಮತ್ತೊಮ್ಮೆ ಏರಲಿದ್ದಾರೆ. NDA ಮೈತ್ರಿಕೂಟಗಳ ಜೊತೆ ಸೇರಿ ಮೋದಿ ಸರ್ಕಾರ ರಚನೆ ಮಾಡಲಿದ್ದಾರೆ. 2014, 2019ರಲ್ಲಿ 2 ಬಾರಿ ಪ್ರಧಾನಿ ಆಗಿದ್ದ ಮೋದಿ ಈ ಬಾರಿ 2024ರಲ್ಲೂ ಪ್ರಧಾನಿಯಾದರೆ 3ನೇ ಬಾರಿಗೆ ದೇಶದ ಅತ್ಯುನ್ನತ ಸ್ಥಾನ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಾರಿ ವಿಶ್ವದ ಅತಿ ದೊಡ್ಡ ಲೋಕಸಭಾ ಚುನಾವಣೆಯನ್ನು 7 ಹಂತಗಳಲ್ಲಿ ಮುಕ್ತಾಯಗೊಂಡಿದೆ. NDA 292, ಇಂಡಿಯಾ ಕೂಟ 234 ಹಾಗೂ ಇತರೆ ಪಕ್ಷ 17 ಕ್ಷೇತ್ರಗಳಲ್ಲಿ ಗೆದ್ದಿದೆ. ಜೊತೆಗೆ ಪ್ರಧಾನಿ ಮೋದಿಯವರು ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ 1,52,513 ಮತಗಳ ಅಂತರದಿಂದ 3ನೇ ಬಾರಿಗೆ ಗೆಲುವು ಪಡೆದಿದ್ದಾರೆ.

ಇದನ್ನೂ ಓದಿ : ನಾಳೆ ಪ್ರಜ್ವಲ್​ ರೇವಣ್ಣ ಕಸ್ಟಡಿ ಅಂತ್ಯ : ಮತ್ತೆ ಕಸ್ಟಡಿಗೆ ಕೇಳಲು SIT ತಯಾರಿ..!

 

 

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here