ಬೆಂಗಳೂರು : ಪೆನ್ ಡ್ರೈವ್ ಪ್ರಕರಣ ಸಂಬಂಧ SIT ಕಸ್ಟಡಿಯಲ್ಲಿರುವ ಪ್ರಜ್ವಲ್ ರೇವಣ್ಣಗೆ ನಾಳೆ ಕಸ್ಟಡಿ ಅಂತ್ಯವಾಗಲಿದೆ. ಆದರೆ ಮತ್ತೆ ಕಸ್ಟಡಿಗೆ ಕೇಳಲು SIT ತಯಾರಿ ನಡೆಸುತ್ತಿದೆ. ವಿಚಾರಣೆ ವೇಳೆ ಪ್ರಜ್ವಲ್ ಕಿಂಚಿತ್ತೂ ಬಾಯಿ ಬಿಟ್ಟಿಲ್ಲ. ವಿಡಿಯೋ ಮಾಡಿದ್ದು ನಾನಲ್ಲ ವಿಡಿಯೋದಲ್ಲಿ ನಾನಿಲ್ಲ, ‘ನಾನವನಲ್ಲ ನಾನವನಲ್ಲ’ ಎಂದು ಪ್ರಜ್ವಲ್ ರೇವಣ್ಣ ಹೇಳುತ್ತಿದ್ದಾರೆ.
CRPC -161ರಡಿ SIT ಸ್ಟೇಟ್ ಮೆಂಟ್ ಮಾಡಿಕೊಂಡಿದ್ದು, ಮತ್ತೆ 5 ದಿನಗಳ ಕಾಲ ಕಸ್ಟಡಿಗೆ ಕೇಳಿ ವಿಚಾರಣೆಗೆ ತಯಾರಿ ಮಾಡುತ್ತಿದೆ. ಹಾಗಾಗಿ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಲು SIT ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ. ಆದರೆ ಕಸ್ಟಡಿಗೆ ನೀಡದಂತೆ ಪ್ರಜ್ವಲ್ ಪರ ವಕೀಲರು ವಾದಿಸೋ ಸಾಧ್ಯತೆಯಿದೆ.
ಪ್ರಜ್ವಲ್ ಯಾಕೆ SIT ವಿಚಾರಣೆಗೆ ಬೇಕೆಂದು SIT ಮಾಹಿತಿ ನೀಡಬೇಕಾಗುತ್ತದೆ. ಪ್ರಜ್ವಲ್ ವಿಚಾರಣೆಯನ್ನು SIT ಅಧಿಕಾರಿಗಳು ಚುರುಕುಗೊಳಿಸಿದೆ. ಚುನಾವಣೆಯಲ್ಲಿ ಗೆದ್ದೆ ಗೆಲ್ತೇನೆ ಎಂದುಕೊಂಡಿದ್ದ ಪ್ರಜ್ವಲ್ ಸೋತ ನಂತರ ಮತ್ತಷ್ಟು ಕುಗ್ಗಿದ್ದಾರೆ.
ಇದನ್ನೂ ಓದಿ : ಹಾಸನದಲ್ಲಿ ಬೆಳ್ಳಂಬೆಳಗ್ಗೆ ನಟೋರಿಯಸ್ ರೌಡಿ ‘ಚೈಲ್ಡ್ ರವಿ’ಯ ಬರ್ಬರ ಹ*ತ್ಯೆ..!