Download Our App

Follow us

Home » ರಾಷ್ಟ್ರೀಯ » ಮೋದಿ 3.0 ಸರ್ಕಾರದ ಮೊದಲ ದಿನ ಅನ್ನದಾತನಿಗೆ ಗಿಫ್ಟ್ ​- ‘ಕಿಸಾನ್ ನಿಧಿ’ ಬಿಡುಗಡೆಗೆ ಸಹಿ ಹಾಕಿದ ಪ್ರಧಾನಿ..!

ಮೋದಿ 3.0 ಸರ್ಕಾರದ ಮೊದಲ ದಿನ ಅನ್ನದಾತನಿಗೆ ಗಿಫ್ಟ್ ​- ‘ಕಿಸಾನ್ ನಿಧಿ’ ಬಿಡುಗಡೆಗೆ ಸಹಿ ಹಾಕಿದ ಪ್ರಧಾನಿ..!

ನವದೆಹಲಿ : ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಆಡಳಿತ ಕೆಲಸವನ್ನು ಆರಂಭಿಸಿದ್ದಾರೆ. ದೇಶದ ಬೆನ್ನೆಲುಬಾದ ರೈತರ ಬಗ್ಗೆ ಕೆಲಸ ಆರಂಭಿಸಿರುವ ಪ್ರಧಾನಿ ಮೋದಿ ಇಂದು ಕಚೇರಿಗೆ ಬಂದ ಕೂಡಲೇ ದೇಶದ ಸುಮಾರು 9.3 ಕೋಟಿ ರೈತರಿಗೆ ‘ಪಿಎಂ ಕಿಸಾನ್ ನಿಧಿ’ಯ 17 ನೇ ಕಂತಿನ ಸುಮಾರು 20,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಅಧಿಕಾರ ನೀಡುವ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು.

ನಿಧಿ ಬಿಡುಗಡೆಗೆ ಸಹಿ ಹಾಕಿದ ನಂತರ ಮೋದಿ, “ನಮ್ಮದು ಕಿಸಾನ್ ಕಲ್ಯಾಣಕ್ಕೆ ಸಂಪೂರ್ಣವಾಗಿ ಬದ್ಧವಾಗಿರುವ ಸರ್ಕಾರವಾಗಿದೆ. ಮುಂದಿನ ದಿನಗಳಲ್ಲಿ ನಾವು ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಕೆಲಸ ಮಾಡಬೇಕೆಂದು ಬಯಸುತ್ತೇವೆ ಎಂದಿದ್ದಾರೆ.

ಇಂದು ಬೆಳಗ್ಗೆ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಪಿಎಂಒ ಸಿಬ್ಬಂದಿ ಹಾಗೂ ಅಧಿಕಾರಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಪ್ರಧಾನಮಂತ್ರಿಯವರೊಂದಿಗೆ ಪಿಎಂಒ, ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ಅವರ ಪ್ರಧಾನ ಕಾರ್ಯದರ್ಶಿ ಇದ್ದರು. ನಮ್ಮದು ರೈತರ ಕಲ್ಯಾಣಕ್ಕೆ ಸಂಪೂರ್ಣವಾಗಿ ಬದ್ಧವಾಗಿರುವ ಸರ್ಕಾರವಾಗಿದೆ. ಆದ್ದರಿಂದ ಅಧಿಕಾರ ವಹಿಸಿಕೊಂಡ ಮೇಲೆ ಸಹಿ ಮಾಡಿದ ಮೊದಲ ಕಡತವು ರೈತ ಕಲ್ಯಾಣಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​​ಗೆ Sorry ಕೇಳಿದ್ಯಾಕೆ ಸಿಎಂ ಸಿದ್ದರಾಮಯ್ಯ

 

 

 

Leave a Comment

DG Ad

RELATED LATEST NEWS

Top Headlines

ವಾಲ್ಮೀಕಿ ಹಗರಣ – ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ 10 ಕೆ.ಜಿ‌ ಚಿನ್ನದ ಬಿಸ್ಕೆಟ್ SIT ವಶಕ್ಕೆ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ‌ ಚಿನ್ನದ

Live Cricket

Add Your Heading Text Here