ಬೆಳಗಾವಿ : ಕರ್ನಾಟಕದ ಲೋಕ ಅಖಾಡದಲ್ಲಿ ಮೊದಲ ಹಂತದ ಮತಯುದ್ಧ ಅಂತ್ಯವಾಗಿದೆ. ಘಟಾನುಘಟಿ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ. ಇದೀಗ ರಾಜ್ಯದಲ್ಲಿ ಎರಡನೇ ಹಂತದ ಕ್ಷೇತ್ರಗಳತ್ತ ರಾಜಕೀಯ ನಾಯಕರ ಚಿತ್ತ ಹರಿದಿದೆ. ಕರ್ನಾಟಕದಲ್ಲಿನ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು, ಇವತ್ತು ಪ್ರಧಾನಿ ಮೋದಿ ರಾಜ್ಯಕ್ಕೆ ರೀ ಎಂಟ್ರಿ ಕೊಡಲಿದ್ದಾರೆ.
ಇವತ್ತು ರಾತ್ರಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ನಾಳೆ ನಾಡಿದ್ದು ಉತ್ತರ ಕರ್ನಾಟಕದಲ್ಲಿ ಮತಶಿಕಾರಿ ನಡೆಸಲಿದ್ದಾರೆ. 2 ದಿನಗಳ ಕಾಲ ಪ್ರಧಾನಿ ಮೋದಿ ರಾಜ್ಯದಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ನಾಳೆ ಬೆಳಗಾವಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಸಲಿದ್ದು, ಮಾಲಿನಿ ಸಿಟಿ ಮೈದಾನದಲ್ಲಿ ಜಗದೀಶ್ ಶೆಟ್ಟರ್ ಪರ ಮೋದಿ ಮತಯಾಚನೆ ಮಾಡಲಿದ್ದಾರೆ.
ಬೆಳಗಾವಿಯಲ್ಲಿ ಇಂದು ರಾತ್ರಿ ನಮೋ ವಾಸ್ತವ್ಯ ಹೂಡಲಿದ್ದಾರೆ. ಇಂದು ಮೋದಿ ವಾಸ್ತವ್ಯ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ. ಮೋದಿ ಉಳಿಯುವ ITC ವೆಲ್ಕಮ್ ಹೋಟೆಲ್ಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಹೋಟೆಲ್ಗೆ 50-60 SPG ಭದ್ರತಾ ಸಿಬ್ಬಂದಿ ಸುಪರ್ದಿಗೆ ನೀಡಲಾಗಿದೆ. ಕಾಕತಿ ಬಳಿ ಇರುವ ಹೋಟೆಲ್ನಲ್ಲಿ ನಾಲ್ಕೈದು ದಿನಗಳಿಂದ ಪರಿಶೀಲನೆ ನಡೆಸಲಾಗಿದೆ.
ನಾಳಿನ ಸಮಾವೇಶಕ್ಕೆ 75 ಸಾವಿರ ಕುರ್ಚಿ ವ್ಯವಸ್ಥೆ, 60 LED ಪರದೆ, 500 ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಬಿಜೆಪಿ ಸಮಾವೇಶಕ್ಕೆ ಬೆಳಗಾವಿಯಲ್ಲಿ ಅಂತಿಮ ತಯಾರಿ ನಡೆಯುತ್ತಿದ್ದು, ಏಪ್ರಿಲ್ 29ರಂದು ಕೂಡ ಕರ್ನಾಟಕದಲ್ಲಿ ನಮೋ ಮತಬೇಟೆ ನಡೆಸಲಿದ್ದಾರೆ. ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ಉತ್ತರಕನ್ನಡದಲ್ಲಿ ಪ್ರಚಾರ ಸಭೆ ಇರಲಿದೆ.
ಇದನ್ನೂ ಓದಿ : ಸ್ಟ್ರಾಂಗ್ ರೂಂನಲ್ಲಿ ಭದ್ರವಾಯ್ತು ಅಭ್ಯರ್ಥಿಗಳ ಭವಿಷ್ಯ – ಏಳು ಸುತ್ತಿನ ಕೋಟೆ ಮಾದರಿ ಭದ್ರತೆ ಕಲ್ಪಿಸಿದ ಪೊಲೀಸರು..! –