Download Our App

Follow us

Home » ರಾಜಕೀಯ » ಮಂಡ್ಯದಲ್ಲಿ ಮುಂದುವರೆದ ಜೋಡೆತ್ತಿನ ಮತಶಿಕಾರಿ : ಬಿಎಸ್​​ವೈ ಹುಟ್ಟೂರಲ್ಲಿ ಇಂದು ದೋಸ್ತಿ ಸಮಾವೇಶ..!

ಮಂಡ್ಯದಲ್ಲಿ ಮುಂದುವರೆದ ಜೋಡೆತ್ತಿನ ಮತಶಿಕಾರಿ : ಬಿಎಸ್​​ವೈ ಹುಟ್ಟೂರಲ್ಲಿ ಇಂದು ದೋಸ್ತಿ ಸಮಾವೇಶ..!

ಮಂಡ್ಯ : ಮಂಡ್ಯದಲ್ಲಿ ಮುಂದುವರೆದ ಜೋಡೆತ್ತಿನ ಮತಶಿಕಾರಿ. ಬಿ.ಎಸ್ ಯಡಿಯೂರಪ್ಪ ಅವರ ಹುಟ್ಟೂರಲ್ಲಿ ಇಂದು ದೋಸ್ತಿ ಸಮಾವೇಶ ನಡೆಯಲಿದೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಬೃಹತ್ ಪ್ರಚಾರ ಸಭೆ ನಡೆಯಲಿದೆ.

ತಮ್ಮ ಗೆಲುವಿಗಾಗಿ ಹೆಚ್​​ಡಿ ಕುಮಾರಸ್ವಾಮಿ ಪ್ರಚಾರ ಮುಂದುವರೆಸಿದ್ದು, ಸಮಾವೇಶದ ಮೂಲಕ ಕುಮಾರಸ್ವಾಮಿ-ವಿಜಯೇಂದ್ರ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್​​ಗೆ ಸೆಡ್ಡು ಹೊಡೆಯುವ ಜೊತೆಗೆ ಪುತ್ರ‌ನ ಸೋಲಿನ ಸೇಡು ತೀರಿಸಿಕೊಳ್ಳಲು ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ಕುಮಾರಸ್ವಾಮಿಗೆ ಬಿಜೆಪಿ ರಾಜ್ಯಾಧ್ಯಕ್ಷ‌ ವಿಜಯೇಂದ್ರ ಬೆಂಬಲವಾಗಿ ನಿಂತಿದ್ದಾರೆ. ಒಕ್ಕಲಿಗ-ಲಿಂಗಾಯತ ಮತಬ್ಯಾಂಕ್​​ನ್ನ ದೋಸ್ತಿ ನಾಯಕರು ಟಾರ್ಗೆಟ್ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆ ಇಂದು ಕೆ.ಆರ್.ಪೇಟೆಯ ಪುರಸಭಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, 50 ಸಾವಿರ ಜನರನ್ನ ಸೇರಿಸಿ ದಳಪತಿಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಹೆಚ್​ಡಿಕೆ, ವಿಜಯೇಂದ್ರಗೆ ಮಾಜಿ ಸಚಿವ ನಾರಾಯಣಗೌಡ ಮತ್ತು ಶಾಸಕ‌ ಹೆಚ್.ಟಿ.ಮಂಜು ಸಾಥ್ ನೀಡಲಿದ್ದಾರೆ.

ಇದನ್ನೂ ಓದಿ : ಸಕಲ ಸರ್ಕಾರಿ ಗೌರವದೊಂದಿಗೆ ದ್ವಾರಕೀಶ್ ಅಂತ್ಯಕ್ರಿಯೆ : ರಾಜ್ಯ ಸರ್ಕಾರ ಆದೇಶ..!

Leave a Comment

RELATED LATEST NEWS

Top Headlines

Live Cricket

Add Your Heading Text Here