ಬೆಂಗಳೂರು : ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಬಂಧನ ಆಗಿದೆ. ಇದೀಗ ಕೊಲೆಯಾದ ರೇಣುಕಾಸ್ವಾಮಿಗೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿಗಳು ಲಭ್ಯವಾಗಿದೆ.
ದರ್ಶನ್ ಕೊಟ್ಟ ಏಟಿಗೆ ಸಾವನ್ನಪ್ಪಿದ ವ್ಯಕ್ತಿ ರೇಣುಕಾಸ್ವಾಮಿಯ ಮದುವೆ ಆಗಿತ್ತು. 2023 ಜೂನ್ 28ರಂದು ರೇಣುಕಾಸ್ವಾಮಿ ವಿವಾಹ ಆಗಿದ್ದನು. ಆತನ ಪತ್ನಿ ತುಂಬು ಗರ್ಭಿಣಿ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಚಿತ್ರದುರ್ಗ ನಗರದ VRS ಬಡಾವಣೆಯ ನಿವಾಸಿ. ಕೆಇಬಿ ನಿವೃತ್ತ ನೌಕರ ಕಾಶಿನಾಥ್ ಶಿವಣ್ಣ ಗೌಡರ್, ರತ್ನಪ್ರಭಾ ಅವರ ಪುತ್ರ. ಇದೀಗ ಮದುವೆಯಾಗಿ ವರ್ಷ ತುಂಬುವ ಮುನ್ನವೇ ರೇಣುಕಾಸ್ವಾಮಿ ಕೊಲೆಯಾಗಿದ್ದಾನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಂಗಳೂರಿನ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ.
ರೇಣುಕಾಸ್ವಾಮಿ ಪೋಷಕರು ಚಿತ್ರದುರ್ಗ ಬಡಾವಣೆ ಠಾಣೆಗೆ ಮಿಸ್ಸಿಂಗ್ ಕಂಪ್ಲೇಂಟ್ ಕೊಡಲು ಹೊರಟಿದ್ರು, ಇದೇ ವೇಳೆಗೆ ನಿನ್ನೆ ಮಧ್ಯಾಹ್ನ ಪೋಷಕರಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಕರೆ ಮಾಡಿ ಮರ್ಡರ್ ವಿಷಯವನ್ನು ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಮನೆಯಲ್ಲಿ ರೇಣುಕಾಸ್ವಾಮಿಯ ಪತ್ನಿ ಕುಸಿದು ಬಿದ್ದಿದ್ದರು.
ರೇಣುಕಾಸ್ವಾಮಿ ಬಾಡಿ ಸಿಕ್ಕಿದ್ದೆಲ್ಲಿ? ಸತ್ವ ಅನುಗ್ರಹ ಅಪಾರ್ಟ್ ಮೆಂಟ್ ನ ಮುಂಭಾಗದಲ್ಲಿರುವ ಮೋರಿಯಲ್ಲಿ ರೇಣುಕಾಸ್ವಾಮಿ ಶವ ಪತ್ತೆಯಾಗಿದೆ. ಅಪರಿಚಿತ ಶವ ಪತ್ತೆ ಸಂಬಂಧ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದರು. 30 ರಿಂದ 35 ವರ್ಷದ ವ್ಯಕ್ತಿ ಶವ ಪತ್ತೆಯಾಗಿದೆ ಎಂದು ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದರು. ರೇಣುಕಾಸ್ವಾಮಿ ಕಿವಿಗೆ ಹಾಗೂ ತಲೆಗೆ ಗಂಭೀರ ಗಾಯ ಆಗಿತ್ತು. ಪೊಲೀಸರು ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯರ ವರದಿ ಪಡೆದಿದ್ದರು.
ಇದನ್ನೂ ಓದಿ : ದರ್ಶನ್ ಹಲ್ಲೆ ಮಾಡಿದ ಯುವಕನ ಶವ ಮೋರಿಯಲ್ಲಿ ಪತ್ತೆ..!